ದಿನದ ಸುದ್ದಿ
ಚಿತ್ರದುರ್ಗದ ಮೂವರು ಪತ್ರಕರ್ತರಿಗೆ ರಾಜ್ಯ ಪ್ರಶಸ್ತಿ
ಚಿತ್ರದುರ್ಗ: ಜಿಲ್ಲೆಯ ಮೂವರು ಹಿರಿಯ ಪತ್ರಕರ್ತರಿಗೆ 2018ನೇ ಸಾಲಿನ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘದಿಂದ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕು ಪ್ರಜಾವಾಣಿ ವರದಿಗಾರ ಕೊಂಡ್ಲಹಳ್ಳಿ ಜಯಪ್ರಕಾಶ್ ಅವರಿಗೆ ಲಕ್ಷ್ಮೀಪತಿ ಕೋಲಾರ ಪ್ರಶಸ್ತಿ,
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕು ವಿಜಯ ಕರ್ನಾಟಕ ವರದಿಗಾರ ರಾಮಗಿರಿ ಯೋಗೀಶ್ ಕುಮಾರ್ ಅವರಿಗೆ ಚಲ್ಲಯ್ಯನಾಡರ್ ಪ್ರಶಸ್ತಿ ಹಾಗೂ
ಚಳ್ಳಕೆರೆ ತಾಲ್ಲೂಕು ಪ್ರಜಾಪ್ರಗತಿ ವರದಿಗಾರ ವೀರೇಶ್ ಚಳ್ಳಕೆರೆ ಅವರಿಗೆ ಲಕ್ಷ್ಮಣ್ ಕೊಡಸೆ ಪ್ರಶಸ್ತಿ ನೀಡಲಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭ ಸೆಪ್ಟೆಂಬರ್ 16ರ ಭಾನುವಾರದಂದು ರಾಯಚೂರಿನಲ್ಲಿ ನಡೆಯಲಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಬಿ.ವೆಂಕಟಸಿಂಗ್, ಪ್ರಧಾನ ಕಾರ್ಯದರ್ಶಿ ಕೆ.ಎಸ್. ಸೋಮಶೇಖರ್ ತಿಳಿಸಿದ್ದಾರೆ.