ದಿನದ ಸುದ್ದಿ

ವಿದ್ಯುತ್ ಬಿಲ್ ಪಾವತಿ ವಂಚನೆ ಬಗ್ಗೆ ಜಾಗೃತಿ

Published

on

ಸುದ್ದಿದಿನ,ದಾವಣಗೆರೆ : ದಾವಣಗೆರೆ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಬೆ.ವಿ.ಕಂ.ನ ಸಿಬ್ಬಂದಿಯೆಂದು ಹೇಳಿಕೊಂಡು ವಿದ್ಯುತ್ ಬಿಲ್ ಪಾವತಿಸುವುದಾಗಿ ಹಣ ಕೇಳಿ ಪಡೆದು ಬಿಲ್ ಪಾವತಿಸದೇ ವಂಚನೆ ಮಾಡಿರುವ ಕೆಲವು ಪ್ರಕರಣಗಳು ತಡವಾಗಿ ಬೆಳಕಿಗೆ ಬಂದಿರುತ್ತವೆ. ಈ ನಿಟ್ಟಿನಲ್ಲಿ ವಿದ್ಯುತ್ ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಕೆಳಕಂಡ ಕೆಲವು ಸೂಚನೆಗಳನ್ನು ಪಾಲಿಸಲು ಕೋರಲಾಗಿದೆ.

ವಿದ್ಯುತ್ ಬಿಲ್ಲನ್ನು ಬೆ.ವಿ.ಕಂ ನ ಅಧಿಕೃತ ಕೌಂಟರ್‍ಗಳಲ್ಲಿಯೇ ಪಾವತಿಸಬೇಕು. ಬೆ.ವಿ.ಕಂ. ನಿಂದ ಕೆಲಸ ನಿರ್ವಹಣೆಗಾಗಿ ಸಿಬ್ಬಂದಿ ತಮ್ಮಲ್ಲಿಗೆ ಬಂದಾಗ ಗುರುತಿನ ಚೀಟಿಯನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳುವುದು.

ವಿದ್ಯುತ್ ಬಿಲ್ಲನ್ನು ಆನ್‍ಲೈನ್‍ನಲ್ಲಿ ಪಾವತಿಸುವುದರ ಮೂಲಕ ಈ ತರಹದ ವಂಚನೆಗಳನ್ನು ತಪ್ಪಿಸಬಹುದು. ಪೇ-ಟಿಎಮ್, ಗೂಗಲ್ ಪೇ ಹಾಗೂ ಬೆವಿಕಂ.ನ “ಬೆಸ್ಕಾಂ ಮಿತ್ರ” ಆ್ಯಪ್ ನ ಮೂಲಕ ವಿದ್ಯುತ್ ಬಿಲ್ ಪಾವತಿಸುವುದು ಕ್ಷೇಮಕರ.

ಯಾರಾದರೂ ಅನುಮಾನಾಸ್ಪದವಾಗಿ ವರ್ತಸಿದಲ್ಲಿ ಕೂಡಲೇ ಬೆ.ವಿ.ಕಂ ಗ್ರಾಹಕರ ಸೇವಾ ಕೇಂದ್ರ ಸಂಖ್ಯೆ 08912-250210 ಹಾಗೂ ಮೊಬೈಲ್ ನಂ. 9483549210 ಗೆ ತಿಳಿಸಬೇಕೆಂದು ಬೆಸ್ಕಾಂ ನಗರ ಉಪ ವಿಭಾಗ-1 ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರಪ್ಪ ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version