ದಿನದ ಸುದ್ದಿ
ದಾವಣಗೆರೆ | ಆಯುರ್ವೇದ ಆಸ್ಪತ್ರೆಯ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ : ಚನ್ನಗಿರಿ ತಾಲೂಕಿನ ಆಯುರ್ವೇದ ಆಸ್ಪತ್ರೆಗೆ ಹೊರಗುತ್ತಿಗೆ ಆಧಾರದ ಆಯುಷ್ ತಜ್ಞ ವೈದ್ಯರು(ಆಯುರ್ವೇದ), ಆಯುಷ್ ತಜ್ಞ ವೈದ್ಯರು(ಹೋಮಿಯೋಪಥಿ), ಔಷಧಿ ವಿತರಕರು (ಫಾರ್ಮಾಸಿಸ್ಟ್), ಮಸಾಜಿಸ್ಟ್, ಕ್ಷಾರಸೂತ್ರ ಮತ್ತು ಸ್ತ್ರೀರೋಗ ಅಟೆಂಡೆಂಟ್ ಹಾಗೂ ಮಲ್ಟಿಪರ್ಪಸ್ ವರ್ಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳಿಗೆ ಅನುಸಾರವಾಗಿ ಕನಿಷ್ಠ ವಿದ್ಯಾರ್ಹತೆ, ವಯೋಮಿತಿ ಸಾಮಾನ್ಯ ವರ್ಗಕ್ಕೆ 35 ವರ್ಷ ಹಾಗೂ ಪ್ರವರ್ಗ-1, 2ಎ, 2ಬಿ, 3ಎ, 3ಬಿ ಗೆ 38 ವರ್ಷ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ 40 ವರ್ಷದೊಳಗಿರಬೇಕು.ಈ ಹುದ್ದೆಗಳ ನೇಮಕಾತಿಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷೆತೆಯಲ್ಲಿ ಆಯ್ಕೆ ಪ್ರಕ್ರಿಯೆ ಮಾಡಲಾಗುವುದು. ಈ ಹುದ್ದೆಗಳು ಸಂಪೂರ್ಣ ತಾತ್ಕಾಲಿಕವಾಗಿದ್ದು, ಗುತ್ತಿಗೆ ಆಧಾರದ ನೇಮಕಾತಿಯ ಎಲ್ಲಾ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟಿರುತ್ತದೆ.ನಿರ್ದೇಶನಾಲಯದಿಂದ ನೀಡುವ ಮಾರ್ಗಸೂಚಿಯಂತೆ ನೇಮಕ ಮಾಡಿಕೊಳ್ಳಲಾಗುವುದು.
ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಜಿಲ್ಲಾ ಆಯುಷ್ ಕಚೇರಿ, ದೇವರಾಜ್ ಅರಸು ಬಡಾವಣೆ ‘ಎ’ ಬ್ಲಾಕ್, 3ನೇ ಕ್ರಾಸ್, ದಾವಣಗೆರೆ-577006 ಇಲ್ಲಿ ಜುಲೈ 20 ರಿಂದ ಆಗಸ್ಟ್ 17 ವರೆಗೆ ಅರ್ಜಿಯನ್ನು ಪಡೆದು ಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಯ ಜೊತೆಗೆ ನಿಗದಿತ ದಾಖಲೆಗಳೊಂದಿಗೆ ಆಗಸ್ಟ್ 26 ರಂದು ಸಂಜೆ 5.30 ರೊಳಗಾಗಿ ಅಂಚೆ ಮೂಲಕ ಅಥವಾ ಖುದ್ದಾಗಿ ಕಚೇರಿಗೆ ಸಲ್ಲಿಸಲು ಸೂಚಿಸಿದೆ. ಹೆಚ್ಚಿನ ಮಾಹಿತಿಗಾಗಿ 08192-221129 ಸಂಖ್ಯೆಗೆ ಸಂಪರ್ಕಿಸಲು ಜಿಲ್ಲಾ ಆಯುಷ್ ಅಧಿಕಾರಿ ಯು.ಸಿದ್ದೇಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243