ದಿನದ ಸುದ್ದಿ

ಏ.11 ರಿಂದ ಪಂಚಾಯತ್ ರಾಜ್ ನಿಂದ ‘ಆಜಾದಿ ಕಾ ಅಮೃತ್ ಮಹೋತ್ಸವ’

Published

on

ಸುದ್ದಿದಿನ ಡೆಸ್ಕ್ : ಆಜಾದಿ ಕಾ ಅಮೃತ್ ಮಹೋತ್ಸವದ ಸ್ಮರಣಾರ್ಥ, ಪಂಚಾಯತ್ ರಾಜ್ ಸಚಿವಾಲಯ ಈ ಉತ್ಸವವನ್ನು ಜನ-ಉತ್ಸವ್ ಆಗಿ ನಾಳೆಯಿಂದ ಇದೇ 17 ರವರೆಗೆ ಸಾಂಪ್ರದಾಯಿಕ ಸಪ್ತಾಹವಾಗಿ ಆಚರಿಸುತ್ತಿದೆ.

“ಪಂಚಾಯತ್ ಕೆ ನವನಿರ್ಮಾಣ್ ಕಾ ಸಂಕಲ್ಪೋತ್ಸವ್” ಎಂಬ ಧ್ಯೇಯ ವಾಕ್ಯದೊಂದಿಗೆಸಪ್ತಾಹವನ್ನು ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಹಲವು ಸರಣಿ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಪಂಚಾಯತ್ ರಾಜ್ ಸಂಸ್ಥೆಗಳ ಮೂಲಕ ಸುಸ್ಥಿರ ಅಭಿವೃದ್ಧಿ ಗುರಿಗಳ ಸ್ಥಳೀಕರಣದ ಕಡೆಗೆ ಎಲ್ಲಾ ಪಾಲುದಾರರ ಆಲೋಚನೆಗಳು, ತಾಂತ್ರಿಕ ಮಧ್ಯಸ್ಥಿಕೆ, ಉತ್ತಮ ಅಭ್ಯಾಸಗಳು ಮತ್ತು ಅತ್ಯಾಧುನಿಕ ಒಳನೋಟ ಹಾಗೂ ವಸ್ತು ಪ್ರದರ್ಶನಗಳು ಸಪ್ತಾಹದ ಕಾರ್ಯಕ್ರಮಗಳಾಗಿವೆ.

ಪಂಚಾಯತ್ ರಾಜ್ ಟ್ವೀಟ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version