ಸಿನಿ ಸುದ್ದಿ

ತಮ್ಮ ಮೊದಲ ಪ್ರೇಮದ ಕುರಿತು ಬಿ.ಎಲ್.ವೇಣು ಹೇಳಿದ್ದೇನು ಗೊತ್ತಾ?

Published

on

ಸುದ್ದಿದಿನ ಬೆಂಗಳೂರು: ಖ್ಯಾತ ಸಾಹಿತಿ ಬಿ.ಎಲ್. ವೇಣು ತಮ್ಮ ಮೊದಲ ಪ್ರೇಮದ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ತಮ್ಮ ಈ ಸಾಧನೆಗೆ ಮೊದಲ ಪ್ರೇಮವೇ ಕಾರಣ ಎಂದು ಹೇಳಿದ್ದಾರೆ.

ಹೌದು, ಶನಿವಾರ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಬೆಳ್ಳಿ ಹೆಜ್ಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಖ್ಯಾತ ಸಾಹಿತಿ ಬಿ.ಎಲ್. ವೇಣು ತಮ್ಮ ಪ್ರೇಮ ಹಾಗೂ ಕಾವ್ಯದ ಕುರಿತು ಹಂಚಿಕೊಂಡಿದ್ದಾರೆ.

ನಾನು ಈ ಮಟ್ಟಕ್ಕೆ ಬೆಳೆಯಲು ನಾನು ಪ್ರೀತಿಸಿದ ಹುಡಿಗೆಯೇ ಕಾರಣ. ಅವಳಿಗೆ ಬರೆದ ಪತ್ರದ ಫಲವೇ ನಾನು ಸಾಹಿತಿಯಾಗಲು ಕಾರಣವಾಯಿತು. ಕಾಲೇಜಿನಲ್ಲಿ ಹಾಡುಗಳನ್ನು ಹಾಡುತ್ತಾ ಬೆಳೆದವನು ನಾನು. ನಾನು ಹಾಡಿದ ರಾಗಕ್ಕೆ ಆಕೆ ನನ್ನನ್ನು ಪ್ರೀತಿಸಲು ಪ್ರಾರಂಭಿಸಿದಳು. ಜಾತಿ ಕಾರಣಕ್ಕೆ ನಾವು ಬೇರೆ ಆದೆವು. ನಂತರ ನಾನು ಕತೆ ಬರೆಯಲು ಶುರು ಮಾಡಿದೆ ಎಂದು ಹೇಳಿದರು.

ಬಂಡಾಯ ಸಾಹಿತ್ಯ ನನ್ನನ್ನು ಸೆಳೆಯಿತು. ಆಗ ನಾನು ಹೆಚ್ಚು ಜನಪ್ರಿಯನಾದೆ. ನಂತರ ಸಿನಿಮಾ ರಂಗದಲ್ಲಿ ಪ್ರವೇಶ ಪಡೆದೆ ಎಂದು ನೆನಪಿಸಿಕೊಂಡರು.

Trending

Exit mobile version