ದಿನದ ಸುದ್ದಿ
ರೇಣುಕಾಚಾರ್ಯಗೆ ಯಡಿಯೂರಪ್ಪ ಹಿಗ್ಗಾಮುಗ್ಗಾ ಕ್ಲಾಸ್
ಸುದ್ದಿದಿನ,ಬೆಂಗಳೂರು : ಸಾಮಾಜಿಕ ಅಂತರ ಕಾಯ್ದು ಕೊಳ್ಳದೆ ಆಶಾ ಕಾರ್ಯಕರ್ತೆ ಯರ ಸಭೆ ನಡೆಸಿದ್ದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ವಿಡಿಯೋವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು, ಕಾರಣ ಮುಖ್ಯಮಂತ್ರಿ ಯಡಿಯೂರಪ್ಪ ರೇಣುಕಾಚಾರ್ಯ ಅವರಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ವಿಡಿಯೋ ನೋಡಿ ಭಾನುವಾರ ರೇಣುಕಾಚಾರ್ಯಗೆ ಕರೆ ಮಾಡಿದ್ದ ಬಿ.ಎಸ್. ಯಡಿಯೂರಪ್ಪ ಅವರು, “ಇಡೀ ದೇಶವೇ ಸಾಮಾಜಿಕ ಅಂತರದ ಬಗ್ಗೆ ಮಾತನಾಡುತ್ತಿದ್ದರೆ ನೀನು ಮಾತ್ರ ಅದನ್ನು ಕಾಪಾಡಿಕೊಳ್ಳದೆ ಸಭೆ ಮಾಡಿದ್ದೀಯಾ? ಶಾಸಕನಾಗಿ ಜವಾಬ್ದಾರಿ ಬೇಡವೇ ಅಂತ ಪ್ರಶ್ನೆ ಮಾಡಿದ್ದಾರೆ. ಇದೇ ಕೊನೆಯ ಎಚ್ಚರಿಕೆ ಇನ್ನೊಮ್ಮೆ ಮರುಕಳಿಸಿದರೆ ಸಹಿಸುವುದಿಲ್ಲ ಅಂತ ಎಚ್ಚರಿಕೆ ಕೂಡ ನೀಡಿದ್ದಾರೆ.”
ಸುದ್ದಿದಿನ.ಕಾಂ|ವಾಟ್ಸಾಪ್|9980346243