ರಾಜಕೀಯ

ಕುಮಾರಸ್ವಾಮಿ ಜನತೆಗೆ ಮೋಸ ಮಾಡುವುದರಲ್ಲಿ ನಿಸ್ಸೀಮ : ಯಡಿಯೂರಪ್ಪ ಕಿಡಿ

Published

on

ಸುದ್ದಿದಿನ, ಮಂಗಳೂರು : ರಾಜ್ಯದಲ್ಲಿ ಲೋಕಸಭಾ ಟಿಕೆಟ್ ಹಂಚಿಕೆ ವಿಚಾರ, ನಿನ್ನೆ ನಾನು ಅಮಿತ್ ಶಾ ಭೇಟಿಯಾಗಿ ಚರ್ಚೆ ಮಾಡಿದ್ದೇನೆ. ಮತ್ತೆ ನಮ್ಮ ರಾಜ್ಯದ ಮುಖಂಡರ ಜೊತೆ ಚರ್ಚಿಸಿ ದೆಹಲಿ ಹೋಗಿ ಫೈನಲ್ ಮಾಡ್ತೇವೆ. ಸುಮಲತಾಗೆ ಸೀಟ್ ಸಿಗೋದು ಬಿಡೋದು ಜೆಡಿಎಸ್-ಕಾಂಗ್ರೆಸ್ ಗೆ ಬಿಟ್ಟದ್ದು. ಆದ್ರೆ ಸುಮಲಾತ ಬಗ್ಗೆ ಹಗುರವಾದ ಮಾತು ಮೆಚ್ಚುವಂಥ ಮಾತಲ್ಲ ಎಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಬೆದರಿಕೆ ಹಾಕೋದು ಮತ್ತು ಹಗುರವಾಗಿ ಮಾತನಾಡೋದಕ್ಕೆ ಮಂಡ್ಯದ ‌ಜನ ಉತ್ತರ ಕೊಡ್ತಾರೆ.ಸುಮಲತಾ ಅವರನ್ನು ಬಿಜೆಪಿಗೆ ಸೆಳೆಯುವ ಯಾವುದೇ ಪ್ರಯತ್ನ ಮಾಡಿಲ್ಲ.
ಅವರು ಪಕ್ಷೇತರರಾಗಿ ನಿಂತ್ರೆ ಬೆಂಬಲಿಸುವ ಬಗ್ಗೆಯೂ ನಿರ್ಧಾರವಾಗಿಲ್ಲ.ಮೋದಿ ಅವರ ಬಗ್ಗೆ ಮಾತನಾಡೋ ನೈತಿಕತೆ ಅಪ್ಪ ಮಕ್ಕಳಿಗೆ ಇಲ್ಲ.ಇದರಿಂದ ಅವರು ಜನರ ಮುಂದೆ ನಗೆಪಾಟಲಿಗೆ ಈಡಾಗ್ತಾರೆ‌ ಎಂದು ಕಿಡಿಕಾರಿದರು.

ನಾಳೆ ನಾಡಿದ್ದು ಲೋಕಸಬಾ ಚುನಾವಣೆ ಘೋಷಣೆಯಾಗುತ್ತೆ. 22 ಲೋಕಸಭಾ ಕ್ಷೇತ್ರ ಗೆಲ್ಲುವ ಉದ್ದೇಶದಿಂದ ಎಲ್ಲಾ ಕಡೆ ಪ್ರವಾಸದಲ್ಲಿದ್ದೇನೆ.ಮೋದಿ ಪರ ನಿರೀಕ್ಷೆ ಮೀರಿ ಅಲೆ ಬೀಸುತ್ತಿದೆ.ಕರ್ನಾಟಕ ಸರ್ಕಾರ ಜನರ ಪಾಲಿಗೆ ಬದುಕಿದ್ದೂ ಸತ್ತಂತೆ. ಅಭಿವೃದ್ಧಿ ಸ್ಥಗಿತವಾಗಿ ವರ್ಗಾವಣೆ ದಂಧೆ ಮತ್ತು ಭ್ರಷ್ಟಾಚಾರದಲ್ಲಿ ನಿರತವಾಗಿದೆ ಎಂದರು.

ಜನರಿಗೆ ವಂಚನೆ, ದ್ರೋಹ ಮತ್ತು ಮೋಸ ಮಾಡೋದ್ರಲ್ಲಿ ಕುಮಾರಸ್ವಾಮಿ ನಿಸ್ಸೀಮ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸ್ತಾರೆ. 20ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ನಮ್ಮ ಸಿಎಂ ಕುಮಾರಸ್ವಾಮಿ ಅಲ್ಲ ಅಂತಿದಾರೆ. ಅವರ ಹಾಸನ, ರಾಮನಗರ, ಮಂಡ್ಯ ಬಿಟ್ಟು ಬೇರೆ ಕಡೆ ಆಸಕ್ತಿ ಇಲ್ಲ ಎಂದು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version