ದಿನದ ಸುದ್ದಿ
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಕಾಮೆಂಟ್ ; ವ್ಯಕ್ತಿ ವಿರುದ್ಧ ದೂರು ದಾಖಲು
ಸುದ್ದಿದಿನ,ಮೈಸೂರು ; ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಕಾಮೆಂಟ್ ಮಾಡಿದ್ದ ವ್ಯಕ್ತಿ ವಿರುದ್ಧ ಯುವ ಕಾಂಗ್ರೆಸ್ ಮುಖಂಡರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮೈಸೂರು ಜಿಲ್ಲೆ ಹುಣಸೂರಿನ ಕಲ್ಕುಣಿಕೆಯ ನಿವಾಸಿ ಗೋವಿಂದ ನಾಯಕ ಎಂಬುವವರ ವಿರುದ್ದ ಹುಣಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ನಿನ್ನೆ ಸಿದ್ದರಾಮಯ್ಯ ಇದೇ ನನ್ನ ಕೊನೆ ಚುನಾವಣೆ ಅಂತ ಹೇಳಿದ್ದರು.
ಗೋವಿಂದ ನಾಯಕ ಎಂಬುವರು ಸಾಮಾಜಿಕ ಜಾಲತಾಣದಲ್ಲಿ ಸಿದ್ದು ಹೇಳಿಕೆಗೆ ಕಾಮೆಂಟ್ ಮಾಡಿದ್ದರು. ನೀನು ಎಲ್ಲೆ ನಿಂತರೂ ಸೋಲು. ನಿನ್ನಂತಹ ದುರಂಹಕಾರಿ ದೇಶದಲ್ಲಿ ಯಾರು ಇಲ್ಲ ಸಿದ್ರಾಮುಲ್ಲಾ. ನೀನು ಸಾ…. ಹುಟ್ಟಿರೋದು ಅಂತ ಕಾಮೆಂಟ್ ಮಾಡಿದ್ದರು.
ಅವಹೇಳನಕಾರಿ ಹಾಗೂ ಶಾಂತಿ ಕದಡುವ ರೀತಿಯಲ್ಲಿ ಕಾಮೆಂಟ್ ಮಾಡಿದ ಆರೋಪದ ಮೇಲೆ ದೂರು ದಾಖಲಿಸಲಾಗಿದೆ. ದೂರಿನಲ್ಲಿ ಕಾಮೆಂಟ್ ಸಹ ಉಲ್ಲೇಖಿಸಲಾಗಿದೆ. ಗೋವಿಂದನಾಯಕನನ್ನು ಬಂಧಿಸುವಂತೆ ಯುವ ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243