ದಿನದ ಸುದ್ದಿ
ಸುಪ್ರಿಸಿದ್ಧ ಬದ್ರೀನಾಥ್ ದೇವಾಲಯ ; ಇಂದಿನಿಂದ ಭಕ್ತಾದಿಗಳಿಗೆ ದರ್ಶನ ಆರಂಭ
ಸುದ್ದಿದಿನ ಡೆಸ್ಕ್ : ಸುಪ್ರಿಸಿದ್ಧ ಬದ್ರೀನಾಥ್ ದೇವಾಲಯದಲ್ಲಿ ಇಂದು ಭಕ್ತಾದಿಗಳಿಗೆ ದರ್ಶನ ಆರಂಭವಾಯಿತು.
ವೇದಮಂತ್ರಗಳ ಘೋಷಣೆಯೊಂದಿಗೆ ದೇವಾಲಯದ ಮಹದ್ವಾರವನ್ನು ಮಿಲಿಟರಿ ಬ್ಯಾಂಡ್‌ಗಳ ಗೌರವದೊಂದಿಗೆ ತೆರೆಯಲಾಯಿತು.
ಉತ್ತರಾಖಂಡ್‌ನ ಚಮೋಲಿ ಜಿಲ್ಲೆಯಲ್ಲಿರುವ ಬದ್ರೀನಾಥ್ ದೇವಾಲಯಕ್ಕೆ ವಿಶ್ವದ ನಾನಾ ಭಾಗಗಳಿಂದ ಭಕ್ತಾದಿಗಳು ಆಗಮಿಸುತ್ತಿದ್ದಾರೆ, ಮೊದಲನೇ ದಿನ ಸರ್ಕಾರದ ಅಧಿಕಾರಿಗಳ ನಿಗಾವಣೆಯಲ್ಲಿ ಸೂಕ್ತ ಬಂದೋಬಸ್ತ್‌ನೊಂದಿಗೆ ಕಳೆದ ಶುಕ್ರವಾರ ಶುಚಿಗೊಳಿಸಲಾಯಿತು.
ಚಾರ್ಧಾಮ್ ಯಾತ್ರೆ ಅಕ್ಷಯ ತೃತೀಯ ದಿನದಂದು ಆರಂಭಗೊಂಡಿದ್ದು, ಇದರೊಂದಿಗೆ ಗಂಗೋತ್ರಿ, ಯಮನೋತ್ರಿ ದೇವಾಲಯಗಳನ್ನು ಸಹ ಭಕ್ತಾದಿಗಳ ದರ್ಶನಕ್ಕೆ ತೆರೆಯಲಾಯಿತು. ಕೋವಿಡ್-19ರ ಹಿನ್ನೆಲೆಯಲ್ಲಿ ಎರಡು ವರ್ಷಗಳ ಕಾಲ ನಂತರ ದೇವಾಲಯಕ್ಕೆ ನಿರ್ಬಂಧನೆ ವಿಧಿಸಲಾಗಿತ್ತು.
Pilgrims visit Badrinath Temple after it reopened for devotees#BadrinathTemple #BadrinathDham #Badrinath pic.twitter.com/a0A6mrV7lK
— India Ahead News (@IndiaAheadNews) May 8, 2022
ಸುದ್ದಿದಿನ. ಕಾಂ|ವಾಟ್ಸಾಪ್|9980346243