ದಿನದ ಸುದ್ದಿ
‘ಬದುಕು ಬೆತ್ತಲಾದಾಗ’ ಒಂದು ರೋಚಕ ಕಥಾನಕ ಕಾದಂಬರಿ ; ಪುಸ್ತಕ ನಿಮ್ಮದಾಗಿಸಿಕೊಂಡು ಓದಿ
- ಶಾಹುಲ್ ಕಾಸಿಮ್
ಮನುಷ್ಯನ ಜೀವನದಲ್ಲಿ ಕಾಲೇಜು ಜೀವನ ಅತ್ಯಂತ ಮಹತ್ವದ ಘಟ್ಟ.ವಿಧ್ಯಾಭ್ಯಾಸ ಪೂರ್ತಿಗೊಳಿಸಿ ಜೀವನದ ದಿಕ್ಕನ್ನು ಬದಲಿಸಬೇಕಾದ ವಿದ್ಯಾರ್ಥಿಗಳಿಬ್ಬರು ಪ್ರೀತಿಯ ಬಲೆಗೆ ಬಿದ್ದು ಕೆಟ್ಟ ಚಟಗಳ ದಾಸರಾಗಿ ಜೀನವನ್ನೇ ಕೊನೆಗೊಳಿಸಿದ ಅತ್ಯಂತ ರೋಚನೀಯ ಕಥೆಗಳನ್ನು ಲೇಖಕರು “ಬದುಕು ಬೆತ್ತಲಾದಾಗ” ಎಂಬ ಪುಸ್ತಕದಲ್ಲಿ ಬೆತ್ತಲುಗೊಳಿಸಿದ್ದಾರೆ.
ತಂದೆ ತಾಯಿಯ ಮಾತನ್ನು ಕಡೆಗಣಿಸಿ ಪ್ರಿಯಕರನ ಹಿಂದೆ ಜೋತು ಬಿದ್ದ ಪ್ರಿಯತಮೆ ತನ್ನ ಗಂಡನಾದವನಿಂದ ಜೀವನದಲ್ಲಿ ಅನುಭವಿಸಿದ ನೋವನ್ನು,ಹಿಂಸೆಯನ್ನು ಲೇಖಕರು ಕಣ್ಣಿನಲ್ಲಿ ಕಣ್ಣೀರು ಬರುವಂತೆ ಕಟ್ಟಿ ಕೊಟ್ಟಿದ್ದಾರೆ.
ಪ್ರೀತಿಯ ಎದುರು ತಂದೆ ತಾಯಿಯ ಹಿರಿಯರ ಮಾತುಗಳನ್ನು ತೊಟ್ಟಿಗೆ ಎಸೆದು ಪ್ರೀತಿಯೇ ಪ್ರಪಂಚವೆಂದು ನಂಬುವ ಜೋಡಿಗಳಿಗೆ ಕೆಲವೊಂದು ಜೀವನಪಾಠಗಳು ಈ ಪುಸ್ತಕದಲ್ಲಿ ಅಡಗಿದೆ.
ಮೋಜು ಮಸ್ತಿ,ಕಾಮದ ಸುಖದಲ್ಲಿ ಜೀವನ ಸಾಗಿಸಿದ ಕಥಾ ನಾಯಕ ಜೈಲಿನಲ್ಲಿ ಅನುಭವಿಸಿದ ಕೊನೆಯ ದಿನಗಳು, ಅಸಭ್ಯರಿಗೆ ಸಮಾಜ ಕೊಡುವ ಗೌರವವನನ್ನು, ಗಂಡನಿಂದ ಬೇರ್ಪಟ್ಟ ಸುಂದರಿ ಹೆಣ್ಣನ್ನು ಭೋಗ ತೀರಿಸುವ ಯಂತ್ರವನ್ನಾಗಿಸಿ ಆಕೆಯಿಂದ ಪಡೆಯಬೇಕಾದೆಲ್ಲವನ್ನು ಪಡೆದು ಕೊನೆಯ ಗಳಿಗೆಯಲ್ಲಿ ಆಕೆಯನ್ನು ಕೈ ಬಿಟ್ಟ ಗಂಡಿನ ಕ್ರೌರ್ಯವನ್ನು ಪುಸ್ತಕ ಬಿಚ್ಚಿಟ್ಟಿದೆ.ಕಾದಂಬರಿ ಓದುತ್ತಾ ಹೋದಂತೆ ನಿಜ ಜೀವನದಲ್ಲಿ ಗತಿಸಿದ ಕೆಲವೊಂದು ಘಟನೆಗಳನ್ನು ನೆನಪಿಸುವಂತೆ ಮಾಡುತ್ತದೆ.
ಒಟ್ಟಾರೆ ಈ ಕಾದಂಬರಿ ನಿಜ ಜೀವನದ ವಾಸ್ತವತೆಯನ್ನು ತೆರೆದಿಟ್ಟು,ಸರಿ ತಪ್ಪುಗಳ ಆಯ್ಕೆಯನ್ನು ಓದುಗರಿಗೆ ತಿಳಿಯಪಡಿಸುತ್ತೆ. ಕಷ್ಟಪಟ್ಟು ಗಳಿಸಿದ ಯಶಸ್ಸು ಕದ್ದು ಗೆದ್ದ ಯಶಸ್ಸುಗಳ ನಡುವಿನ ವ್ಯತ್ಯಾಸ ವನ್ನು ಸೂಚಿಸುತ್ತದೆ.ಒಟ್ಟು 186 ಪುಟಗಳ 24 ಅಧ್ಯಾಯಗಳು ಓದುಗನಿಗೆ ಆಯಾಸರಹಿತವು ಮತ್ತಷ್ಟು ಪುಟಗಳ ಹುಡುಕಾಟ ನಡೆಸದೆ ಇರದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243