ದಿನದ ಸುದ್ದಿ
91 ಕೊರೋನಾ ಸೋಂಕಿತರ ಪೈಕಿ 74 ಜನ ಗುಣಮುಖ : ಓರ್ವ ಬಾಲಕಿಗೆ ಕೊರೋನಾ ಪಾಸಿಟಿವ್
ಸುದ್ದಿದಿನ,ಬಾಗಲಕೋಟೆ : ಜಿಲ್ಲೆಯ ಬೀಳಗಿ ತಾಲೂಕಿನ ಸಿದ್ದಾಪೂರ ಗ್ರಾಮದ ಓರ್ವ ಬಾಲಕಿಗೆ ಕೋವಿಡ್ ಸೋಂಕು ಇರುವುದು ಗುರುವಾರ ದೃಡಪಟ್ಟಿದ್ದು, ಸೋಂಕಿತರ ಸಂಖ್ಯೆ 91ಕ್ಕೆ ಏರಿಕೆಯಾಗಿದೆ. 91 ಸೋಂಕಿತರ ಪೈಕಿ 74 ಜನ ಗುಣಮುಖರಾಗಿರುವುದಾಗಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಸಿದ್ದಾಪೂರ ಗ್ರಾಮದ 17 ವರ್ಷದ ಬಾಲಕಿ (ಪಿ:ಬಿಜಿಕೆ-91) ಗೆ ಸೋಂಕು ದೃಡಪಟ್ಟಿದೆ. ಸದರಿ ಬಾಲಕಿ ಮಹಾರಾಷ್ಟ್ರದ ರಾಜ್ಯದಿಂದ ಬಂದಿದ್ದು, ಮಹಾರಾಷ್ಟ್ರದ ನಂಟಿನಿಂದ ಸೋಂಕು ದೃಡಪಟ್ಟಿರುವುದಾಗಿ ತಿಳಿದುಬಂದಿದೆ. ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸಿದಾಗ ಸಾಂಸ್ಥಿಕ ಕ್ವಾರಂಟೈನ್ ಮಾಡಿ ಗಂಟಲು ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿಯಲ್ಲಿ ಪಾಜಿಟಿವ್ ಕೋವಿಡ್ ದೃಡಪಟ್ಟ ನಂತರ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಸಿಪ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲೆಯಿಂದ ಕಳುಹಿಸಲಾದ ಒಟ್ಟು 325 ಸ್ಯಾಂಪಲ್‍ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಪ್ರತ್ಯೇಕವಾಗಿ 729 ಜನರ ಮೇಲೆ ನಿಗಾ ವಹಿಸಲಾಗುತ್ತಿದೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 8549 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪೈಕಿ 8097 ನೆಗಟಿವ್ ಪ್ರಕರಣ, 91 ಪಾಜಿಟಿವ್ ಪ್ರಕರಣ ಹಾಗೂ ಒಂದು ಮೃತ ಪ್ರಕರಣ ವರದಿಯಾಗಿರುತ್ತದೆ. ಕೋವಿಡ್-19 ದಿಂದ ಒಟ್ಟು 74 ಜನ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇನ್ನು 16 ಜನ ಕೋವಿಡ್ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಬಾದಾಮಿ ತಾಲೂಕಿನ ಢಾಣಕಶಿರೂರ ಗ್ರಾಮ ಮತ್ತು ಮುಧೋಳ ನಗರದ ವಡ್ಡರಗಲ್ಲಿ ಸೇರಿ ಎರಡು ಕಂಟೈನ್‍ಮೆಂಟ್ ಝೋನ್‍ಗಳು ಮಾತ್ರ ಇವೆ. ಇಲ್ಲಿವರೆಗೆ ಒಟ್ಟು 13 ಸ್ಯಾಂಪಲ್‍ಗಳು ಮಾತ್ರ ರಿಜೆಕ್ಟ ಆಗಿರುತ್ತವೆ. 14 ದಿನಗಳ ಕಾಲ ಇನ್‍ಸ್ಟಿಟ್ಯೂಶನ್ ಕ್ವಾಂರಂಟೈನ್‍ನಲ್ಲಿದ್ದ 2569 ಜನರನ್ನು ಬಿಡುಗಡೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಸ್ಥಾಪಿಸಲಾದ 9 ಚೆಕ್‍ಪೋಸ್ಟಗಳ ಪೈಕಿ ಸದ್ಯ 1 ಚೆಕ್ ಪೋಸ್ಟ ಕಾರ್ಯನಿರ್ವಹಿಸುತ್ತಿವೆ. ಇಲ್ಲಿವರೆಗೆ ಚೆಕ್‍ಪೋಸ್ಟಗಳ ಮೂಲಕ 55578 ವಾಹನಗಳ ತಪಾಸಣೆ ಹಾಗೂ 2,14,730 ಜನರನ್ನು ಥರ್ಮಲ್ ಸ್ಕ್ರೀನಿಂಗ್ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243