ದಿನದ ಸುದ್ದಿ
ಮಾನಹಾನಿ ವಿಷಯ ಪ್ರಕಟಣೆ: ಕನ್ನಡಪ್ರಭ, ಉದಯವಾಣಿ ಸಂಪಾದಕರಿಗೆ ಜಾಮೀನು
ಸುದ್ದಿದಿನ, ಹೊಳಲ್ಕೆರೆ: ಮಾನಹಾನಿ ಸುದ್ದಿ ಪ್ರಕಟಿಸಿ ಪ್ರಚುರಪಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕನ್ನಡ ಪ್ರಭ ಮತ್ತು ಉದಯವಾಣಿ ಪತ್ರಿಕೆಗಳ ಸಂಪಾದಕರಿಗೆ ಹೊಳಲ್ಕೆರೆ ಘನ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಮಾನಹಾನಿ ಪ್ರಕರಣದಲ್ಲಿ ಕನ್ನಡಪ್ರಭ ಪತ್ರಿಕೆಯ ಪ್ರಧಾನ ಸಂಪಾದಕ ರವಿಹೆಗಡೆ, ಮುದ್ರಕ ಮತ್ತು ವಿತರಕರಾದ ವಾಸುದೇವ ಶೆಟ್ಟಿ, ಉದಯವಾಣಿ ಪತ್ರಿಕೆಯ ಸ್ಥಾನಿಕ ಸಂಪಾದಕ ವೆಂಕಟೇಶ್ ಪ್ರಭು ಹಾಗೂ ಪತ್ರಿಕೆಗಳಿಗೆ ಸುಳ್ಳು ಹೇಳಿಕೆ ನೀಡಿದ್ದ ಕೆ.ಸಿ. ಪುರುಷೋತ್ತಮ, ಕೆ.ಎಂ.ಹಾಲಸ್ವಾಮಿ ಹೊಳಲ್ಕೆರೆ ಜೆ.ಎಂ.ಎಫ್.ಸಿ ಘನ ನ್ಯಾಯಾಲಯದಲ್ಲಿ ದೂರು ದಾಖಲಾಗಿತ್ತು. ಈ ಸಂಬಂಧ ಪತ್ರಿಕೆಗಳ ಸಂಪಾದಕರು ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗಿ ಸೂಕ್ತ ಭಧ್ರತೆ ನೀಡಿ ಜಾಮೀನು ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Read This: ರಸ್ತೆಯ ಗುಂಡಿ ಮುಚ್ಚಿ ಸಾರ್ವಜನಿಕರ ಮೆಚ್ಚುಗೆ ಪಡೆದ ಪೊಲೀಸ್ ಪೇದೆ..!
ವಕೀಲ ಮತ್ತು ಮಾಹಿತಿ ಹಕ್ಕು ಹೋರಟಗಾರ ಬಿ.ಎಸ್. ಪ್ರಭಾಕರ್ ಮತ್ತು ಅವರ ಕುಟುಂಬ, ಸ್ನೇಹಿತರ ವಿರುದ್ಧ ಕಳೆದ ವರ್ಷದ ಏಪ್ರಿಲ್‍ನಲ್ಲಿ ಕನ್ನಡಪ್ರಭ ಮತ್ತು ಉದಯವಾಣಿ ಪತ್ರಿಕೆಗಳಲ್ಲಿ ಮಾನಹಾನಿ ಸುದ್ದಿಪ್ರಕಟಿಸಿ ಪ್ರಚುರ ಪಡಿಸಿದ್ದರು ಎಂದು ದೂರಲಾಗಿತ್ತು. ವಿಷಯಕ್ಕೆ ಸಂಬಂದಿಸಿದಂತೆ ವಕೀಲ ಬಿ.ಎಸ್. ಪ್ರಭಾಕರ್ ಹೊಳಲ್ಕೆರೆ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಪ್.ಸಿ ನ್ಯಾಯಾಲಯದಲ್ಲಿ ಮೇಲ್ಕಂಡ ಕ್ರಿಮಿನಲ್ ಪ್ರಕರಣ ದಾಖಲು ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.