ದಿನದ ಸುದ್ದಿ
ಗಣೇಶ ವಿಸರ್ಜನೆ; ಹರಪನಹಳ್ಳಿ ಬಜರಂಗದಳದ ಅಧ್ಯಕ್ಷ ಸಾವು
ಸುದ್ದಿದಿನ, ದಾವಣಗೆರೆ: ಗಣೇಶ ಮೂರ್ತಿ ವಿಸರ್ಜನೆ ವೇಳೆ ಸಂಭವಿಸಿದ ಅವಘಡದಲ್ಲಿ ಬಜರಂಗದಳದ ಅಧ್ಯಕ್ಷ ಸಾವನಪ್ಪಿರುವ ಘಟನೆ ಹರಪನಹಳ್ಳಿಯಲ್ಲಿ ಸಂಭವಿಸಿದೆ. ಗಣೇಶ ಮೂರ್ತಿ ಮೆರವಣಿಗೆ ಸಂದರ್ಭದಲ್ಲಿ ವಿದ್ಯುತ್ ತಗುಲಿ ಬಜರಂಗದಳದ ಅಧ್ಯಕ್ಷ ಹನುಮಂತಪ್ಪ ಸಾವನಪ್ಪಿದ್ದಾರೆ. ಟ್ರ್ಯಾಕ್ಟರ್ಗೆ ವಿದ್ಯುತ್ ತಂತಿ ತಗುಲಿದ ಕಾರಣ ದುರಂತ ಸಂಭವಿಸಿದೆ.
ಗಣೇಶ ಮೂರ್ತಿ ವಿಸರ್ಜನೆಗೆ ಭಾನುವಾರ ರಾತ್ರಿ ಕೆರೆಯ ಬಳಿ ಹೋಗುತ್ತಿದ್ದಾಗ ಟ್ರ್ಯಾಕ್ಟರ್ಗೆ ತಂತಿ ತಗುಲಿದ್ದು, 20 ಮಂದಿ ಕೆಳಗೆ ಹಾರಿ ಜೀವ ಉಳಿಸಿಕೊಂಡಿದ್ದಾರೆ. ಆದರೆ ಹನುಮಂತಪ್ಪ ತೀವ್ರವಾಗಿ ಗಾಯಗೊಂಡಿದ್ದರು.ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೂ ಚಿಕಿತ್ಸೆ ಫಲಕಾರಿ ಆಗಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.