ಬಹಿರಂಗ

‘ಬಲಿ ಚಕ್ರವರ್ತಿ’ ಈ ನೆಲದ ಹೆಮ್ಮಯ ಸಾಂಸ್ಕ್ರತಿಕ ನಾಯಕ

Published

on

ಲಿ ಚಕ್ರವರ್ತಿ ಈ ನೆಲದ ಮೂಲನಿವಾಸಿಗಳ ಹೆಮ್ಮೆಯ ರಾಜ . ಬಲಿ ಚಕ್ರವರ್ತಿಯ ಸಾಮ್ರಾಜ್ಯ ಅತ್ಯಂತ ವಿಶಾಲವಾದ ಮತ್ತು ಸಮ್ರದ್ದಿಯಿಂದ ಕೊಡಿದ ಸಾಮ್ರಾಜ್ಯವಾಗಿತ್ತು. ಬಲಿರಾಜ ಸಾಮ್ರಾಜ್ಯದ ವಿಸ್ತರಣೆ ಕೇಳಿದರೆ ವಿಸ್ಮಯ ಎನಿಸುತ್ತದೆ . ಇಂದಿನ ಶ್ರಿಲಂಕಾದಲ್ಲಿನ ಕೆಲವು ದ್ವೀಪಗಳು ಸಹ ಇವನ ಆಳ್ವಿಕೆಯಲ್ಲಿ ಸೇರಿದ್ದವು. ಮಲೇಷಿಯಾದಲ್ಲಿ ಸಹ ಇವನ ಆಳ್ವಿಕೆಗೆ ಒಳಪಟ್ಟ ಒಂದು ದ್ವೀಪ ಇತ್ತು ಇಂದಿಗೂ ಅದನ್ನು ‘ಬಾಲಿ’ ದ್ವೀಪ ಎಂದು ಕರೆಯುವರು.ಕರಾವಳಿ ಪ್ರದೇಶದಿಂದ ಹಿಡಿದು ದೂರದ ಪಶ್ಚಿಮ ಕೊಲ್ಲಾಪುರದವರಗೆ ಹರಡಿದ ಪ್ರದೇಶವೂ ಬಲಿರಾಜನ ಆಳ್ವಿಕೆಗೆ ಒಳಪಟ್ಟಿತ್ತು. ಇತನ ಆಡಳಿತ ಕೇಂದ್ರ ರತ್ನಗಿರಿ ಆಗಿತ್ತು. ಇಷ್ಟೆ ಅಲ್ಲ ಬಲಿರಾಜನು ದಕ್ಷಿಣ ಮಹಾರಾಷ್ಟ್ರದಲ್ಲಿ ಆಳ್ವಿಕೆ ನೆಡೆಸುತ್ತಿದ್ದ.ಇಲ್ಲಿನ ಮೂಲನಿವಾಸಿಗಳನ್ನು ಮಹಾರಾಷ್ಟ್ರೀಯರು ಎಂದು ಮುಂದೆ ಅವರನ್ನು ಮರಾಠರು ಎಂದು ಕರೆದರು.

ಬಲಿ ಚಕ್ರವರ್ತಿ ತುಳಿತಕೊಳ್ಳಗಾದ ಮತ್ತು ದಮನಿತರ ಧ್ವನಿಯಾಗಿದ್ದ .‌ಈತ ಅಪ್ಪಟ ಸಂಗೀತ ಪ್ರೇಮಿಯಾಗಿದ್ದ ಮತ್ತು ‘ಮಲ್ಲಾರ’ ಎಂಬ ಹೊಸರಾಗ ಒಂದನ್ನು ಸಂಯೋಜಿಸಿದ್ದ ಮಿಯಾನ್ ಎಂಬ ಇನ್ನೊಬ್ಬ ಸಂಗೀತಕಾರ ಈ ಮಲ್ಲಾರ್ ರಾಗವನ್ನು ಲಯಬದ್ದವಾಗಿ ಸಂಯೋಜಿಸಿದ್ದ ಅದಕ್ಕೆ ‘ ಮಿಯಾನ್ ಮಲ್ಲಾರ್’ ರಾಗವಾಗಿ ಪ್ರಸಿದ್ದಿಗೆ ಬಂತು . ಅದರಂತೆ ಬಲಿಚಕ್ರವರ್ತಿ ತನ್ನ ವಿಶ್ರಾಂತಿ ಸಮಯವನ್ನು ಕಾಶಿಯಲ್ಲಿ ಕಳೆಯುತ್ತಿದ್ದ ಅಂತಹ ಸಂಧರ್ಭದಲ್ಲಿ ಮತ್ತೊಂದು ರಾಗವನ್ನು ಸಂಯೋಜಿಸಿದ್ದ ಅದು ಮುಂದೆ ಭೈರವ ರಾಗವೆಂದು ಪ್ರಸಿದ್ದಿಗೆ ಬಂತು. ತಾನ್ ಸೇನ್ ನಂತಹ ಸಂಗೀತ ದಿಗ್ಗಜಯ ಮನಸೂರೆಗೊಂಡ ರಾಗ ಭೈರವದ ಜನಕ ಬಲ ಚಕ್ರವರ್ತಿ. ಜೊತೆಗೆ “ಡಾರ್” ಎಂಬ ಸಂಗೀತದ ಉಪಕಣವನ್ನು ಕಂಡುಹಿಡಿದಿದ್ದು ಇದೆ ಬಲಿಮಹಾರಾಜ.

ಬಲಿ ಚಕ್ರವರ್ತಿ ಈ ದೇಶದ ಮೂದಲ ಕ್ರಷಿಕ ಚಕ್ರವರ್ತಿ . ರೈತರ ಬಗ್ಗೆ ಅಪಾರ ಕಾಳಿಜಿ ಇದ್ದ ಈ ರಾಜ ರೈತರ ಕಷ್ಟ ,ಸುಖ, ದುಃಖಗಳನ್ನು ಆಲಿಸಲೆಂದೆ ಇಬ್ಬರು ಅಧಿಕಾರಿಗಳನ್ನು ನೇಮಿಸಿರುತ್ತಾನೆ ಅವರೆ ” ಮಹಾ -ಸುಭಾ” ಇವರು ತುಂಬಾ ಪ್ರಮಾಣಿಕರಾಗಿದ್ದು ರೈತಾಪಿ ವರ್ಗದ ಏಳಿಗೆಗಾಗಿ ತಮ್ನನ್ನೆ ತಾವು ಸಮರ್ಪಿಸಿಕೊಂಡಿದ್ದರು . ರೈತರು ಬೆಳೆದ ಬೆಳಗೆ ನೀಡಬಹುದಾದ ಎಲ್ಲ ಸೌಲಭ್ಯಗಳನ್ನು ಈ ಅಧಿಕಾರಿಗಳ ಮೂಲಕ ಬಲಿಚಕ್ರವರ್ತಿ ಅದನ್ನು ಪೂರೈಸುತ್ತಿದ್ದ. ಆ ಅಧಿಕಾರಿಗಳುರೈತರ ಬಗೆಗಿನ ಕಾಳಜಿಯಿಂದಾಗಿ ರೈತವರ್ಗ ಅವರನ್ನು ಸ್ಮರಿಸದೆ ಇರಲಾರದು. ಇಂದಿಗೂ ಯಾವುದೆ ಕ್ರಷಿ ಚಟುವಟಿಕೆ ಇರಲಿ ಅದನ್ನು ಆರಂಭಿಸುವಾಗ ,ಕಣ( ರಾಶಿ) ಮಾಡುವಾಗ ಸಸಿ ನೆಡುವುವಾಗ ಹೊಲದ ಬದುವಿನ ಮೇಲೆ ಮತ್ತು ರಾಶಿಯ ಮುಂದೆ ಎರಡು ಕಲ್ಲುಗಳನ್ನು ಇಟ್ಟು ಅದಕ್ಕೆ ಸುಣ್ಣ ಬಳಿದ ಪೂಜಿಸುವುದು ಇಂದಿಗೂ ವಾಡಿಕೆ ಇದೆ ಆ ಎರಡು ಕಲ್ಲುಗಳೆ “ಮಹಾ- ಸುಭಾ” ಪ್ರತೀಕವೆಂದು ತಿಳಿದು ಇಂದಿಗೂ ಪೂಜೆ ಸಲ್ಲಿಸುವುದು ರೈತಾಪಿವರ್ಗಗಳಲ್ಲಿ ಕಂಡು ಬರುತ್ತೆ. ಹಾಗಾಗಿ ರೈತವರ್ಗವು ಬಲಿಚಕ್ರವರ್ತಿ ಕಾಲದಲ್ಲಿ ನೆಮ್ಮದಿಯಿಂದ ಇತ್ತು. ಇಷ್ಟೆ ಅಲ್ಲದೆ ಅನೇಕ ವಿದ್ವಾಂಸರು ಬಲಿರಾಜನ ರಾಜ್ಯಕ್ಕೆ ಬಂದು ಅಧ್ಯಯನ ನೆಡೆಸಿದರು. ದಶರಥನ ತಂದೆ ಅಜಪಾಲನಿಗಿಂತಲೂ ಮತ್ತು ಆ ಕಾಲದ ಎಲ್ಲಾ ರಾಜರುಗಳಿಗಿಂತ ವಿಸ್ತಾರ ಮತ್ತು ಸಮ್ರದ್ದಿಯಾದ ಸಾಮ್ರಾಜ್ಯ ಬಲಿ ಚಕ್ರವರ್ತಿಯದು ಆಗಿತ್ತು.

ಹೀಗೆ ಸಮ್ರದ್ದಿಯಿಂದ ಸುಖದಿಂದ ಆ ಸಾಮ್ರಜ್ಯದ ಆಡಳಿತವನ್ನು ಸಹಿಸದ ವಿಪ್ರ ವಾಮನ ತನ್ನ ಸೈನ್ಯದೊಂದಿಗೆ ಬಲಿಯ ಸಾಮ್ರಾಜ್ಯದ ಮೇಲೆ ದಾಳಿ ಮಾಡಿದ . ಆಗ ವಾಮನ ಸೈನ್ಯವನ್ನು ಹಿಮ್ಮೆಟ್ಟಿಸುವುದು ಅನಿವಾರ್ಯವೆ ಆಯಿತು . ಬಲಿ ಚಕ್ರವರ್ತಿಯ ಸೈನ್ಯ ಪ್ರತಿದಿನವು ವಾಮನ ಸೈನ್ಯದೊಂದಿಗೆ ಸೆಣಸಾಡಿತು.’ಭಾದ್ರಪದ ದ್ವೀತಿಯ ಪಕ್ಷದಂದು ಸೂರ್ಯಾಸ್ತದ ನಂತರ ಯುದ್ದ ನಿಲ್ಲಿಸಿ ಎರಡು ಪಾಳೆಯ ಸೈನ್ಯಗಳೂ ವಿಶ್ರಾಂತಿಗೆಂದು ತಮ್ಮ ಡೇರೆಗಳಿಗೆ ತರೆಳಿದರು . ತಮ್ಮ ಪಾಳೆಯಗಳಲ್ಲಿ ಯುದ್ದದಲ್ಲಿ ಮಡಿದವರ ತ್ಯಾಗ ಬಲಿದಾನಗಳನ್ನು ಸ್ಮರೀಸಲಾಯಿತು.ಅದನ್ನು ಇಂದಿಗೂ ಭಾದೃಪದ ದ್ವೀತಿಯ ಪಕ್ಷದಂದು ಮನೆಯಲ್ಲಿ ತೀರಿಹೋದ ಹಿರಿಯರ ಸ್ಮರಣಗೆ ವಾರ್ಷಿಕ ತಿಥಿ ಅಥವಾ ವರ್ಷಾಂತಿಕ ಶ್ರಾದ್ದ ಮಾಡುವುದು ಇಂದಿಗೂ ವಾಡಿಕೆಯಲ್ಲಿದೆ.ಹೀಗೆ ಸತತ ಎಂಟು ದಿನಗಳಕಾಲ ಯುದ್ದದಲ್ಲಿ ವೀರಬಾಹುವಿನಂತೆ ಹೋರಾಡಿದ ಬಲಿ ಎಂಟನೆ ದಿನಕ್ಕೆ ಯುದ್ದ ಭೂಮಿಯಲ್ಲಿಯೆ ವೀರಮರಣವನ್ನುಪ್ಪುತ್ತಾನೆ .

ಹೀಗೆ ವೀರ ಮರಣವನ್ನು ಅಪ್ಪಿದ ಬಲಿಯ ಬರುವಿಕೆಗಾಗಿ ಮತ್ತು ಯುದ್ದದಲ್ಲಿ ಅಳಿದುಳಿದ ಬಾಣಸುರನ ಸೈನ್ಯವು ಅಶ್ವಿನಿ ಮಾಸದ ಹತ್ತನೆ ದಿನದಂದು ತಾಯಿನಾಡಿಗೆ ಮರಳಿತು. ಜನರಿಂದ ಜನರಿಗೆ ಹ್ರದಯದಿಂದ ಹ್ರದಯಕ್ಕೆ ಸುಖ ಸಮ್ರದ್ದಿಯನ್ನು ತರಲಿಕಕ್ಕೆಗೋಸ್ಕರ ಬಲಿ ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಹಾರೈಸಿ ಸ್ತ್ರಿಯರು ಆರತಿ ಎತ್ತಿ ಶುಭಹಾರೈಸುತ್ತಾರೆ. ಇಂದಿಗೂ ಬಲಿಪಾಡ್ಯದಂದು ಸ್ತ್ರಿಯರು ತಟ್ಟೆಯಲ್ಲಿ ಎರಡು ದೀಪಗಳ ಬೆಳಕಿನಲ್ಲಿ ಆರತಿ ಎತ್ತಿ ಮನು ಆಡಳಿತಕೊನೆಗೊಂಡು ಬಲಿ ಆಡಳಿತ ಮತ್ತೊಮ್ಮೆ ಬರಲಿ ಎನ್ನುವ ಉದ್ದೇಶಕ್ಕಾಗಿ ದೀಪಾವಳಿಯ ಬಲಿಪಾಡ್ಯದಂದು ಆರತಿ ಎತ್ತಿ ಶುಭಹಾರೈಸುತ್ತಾರೆ. ಆದರೆ ಮುಂದೆ ಪುರೋಹಿತ ಶಾಹಿಗಳು ಇದರ ಆಚರಣೆಯ ಅರ್ಥವನ್ನೆ ಬದಲಾಯಿಸಿ ಬಿಟ್ಟರು.

Trending

Exit mobile version