ಲೈಫ್ ಸ್ಟೈಲ್

ಆರೋಗ್ಯದ ಗಣಿ ‘ಬಾಳೆ ಹಣ್ಣಿ’ನ ಮಹತ್ವ ತಿಳಿದರೆ ಅಚ್ಚರಿ ಪಡ್ತಿರಾ..!

Published

on

ಸುದ್ದಿದಿನ ಡೆಸ್ಕ್ : ಬಾಳೆಹಣ್ಣು ಎಂದರೆ ಎಲ್ಲರಿಗೂ ಇಷ್ಟ ಆಗುವ ಹಣ್ಣು. ಅದರ ಉಪಯೋಗಗಳು ಸಹ ಗೊತ್ತು. ಅದರ ಉಪಯೋಗದ ಜೊತೆಗೆ ಅದರ ಎಲ್ಲಾ ಭಾಗಗಳ ಉಪಯೋಗ ತಿಳಿದರೆ ಇನ್ನೂ ನಾವು ಅದನ್ನು ಹೆಚ್ಚಾಗಿ ಬಳಸಬಹುದು. ಬಾಳೆಹಣ್ಣಿನ ಜೊತೆಗೆ ಅದರ ಹೂವು, ಕಾಯಿ, ದಿಂಡು, ಸಿಪ್ಪೆ, ಎಲೆ ಎಲ್ಲಾದರಿಂದ ಉಪಯೋಗ ಇದೇ. ಪ್ರತಿನಿತ್ಯ ಒಂದು ಬಾಳೆ ಹಣ್ಣನ್ನು ತಿನ್ನಬೇಕು. ಇದು ದೇಹಕ್ಕೆ ಬೇಕಾದ ಶೇ. 25ರಷ್ಟು ಸಕ್ಕರೆಯನ್ನು ಒದಗಿಸುತ್ತದೆ. ಬಾಳೆಹಣ್ಣು ಸೇವಿಸುವುದರಿಂದ ಜೀರ್ಣಶಕ್ತಿ ಅಧಿಕವಾಗುವುದು, ದೇಹದ ತೂಕವೂ ಸಹ ಹೆಚ್ಚಾಗುವುದು.

ಉಪಯೋಗಗಳು

  1. ಬಾಳೆ ಕಾಯಿಯ ತಿರುಳನ್ನು ಹಾಲಿನಲ್ಲಿ ಬೇಯಿಸಿ ತಿಂದರೆ ಹೊಟ್ಟೆ ಹುಣ್ಣು, ಮೂಲವ್ಯಾಧಿಯ ನೋವು ನಿವಾರಣೆಯಾಗುತ್ತದೆ.
  2. ನೇಂದ್ರ ಬಾಳೆಯ ತಿರುಳನ್ನು ಚೆನ್ನಾಗಿ ಬೇಯಿಸಿ, ಅದಕ್ಕೆ ಶುಂಠಿಯ ಪುಡಿ ಮತ್ತು ಜೀರಿಗೆ ಪುಡಿಯನ್ನು ಹಾಗೂ ಬೆಲ್ಲವನ್ನು ಸೇರಿಸಿ ಸೇವಿಸುತ್ತಿದ್ದರೆ ಅಲ್ಸ್ಟರ್ ಇಲ್ಲವಾಗಿವಿದು.
  3. ಬಾಳೆಹಣ್ಣನ್ನು ಮೊಸರು ಅನ್ನದಲ್ಲಿ ಕಿವುಚಿಕೊಂಡು ತಿಂದರೆ ಕಣ್ಣು ಉರಿ, ಅಂಗಾಲು ಉರಿ ಶಾಂತವಾಗುವುದರ ಜೊತೆಗೆ ಮಲಬದ್ಧತೆ ನಿವಾರಣೆಯಾಗುತ್ತದೆ.
  4. ಹಾಲು ಮತ್ತು ಜೇನುತುಪ್ಪದೊಡನೆ ಬಾಳೆಹಣ್ಣನ್ನು ಎಳೆಮಕ್ಕಳಿಗೆ ಕೊಡುವುದರಿಂದ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ರಕ್ತ ಪುಷ್ಟಿಯಾಗುತ್ತದೆ.
  5. ಬಾಳೆಹಣ್ಣನ್ನು ಮಜ್ಜಿಗೆಯೊಂದಿಗೆ ಟೈಫಾಯಿಡ್ ರೋಗಿಗಳಿಗೆ ಕೊಡುವುದರಿಂದ ಶೀಘ್ರವಾಗಿ ಗುಣವಾಗುತ್ತದೆ.
  6. ಬಸರಿಯರು ಬಾಳೆಹಣ್ಣನ್ನು ಪ್ರತಿದಿನ ಸೇವಿಸಿದರೆ ಹೆರಿಗೆ ಬಹು ಸುಲಭವಾಗಿ ಆಗುತ್ತದೆ.
  7. ಬಾಳೆಹಣ್ಣಿನಲ್ಲಿ ಗಂಧಕ ಮತ್ತು ಕಬ್ಬಿಣದ ಸತ್ವವಿರುವುದರಿಂದ ಬಲವರ್ಧಕವೂ, ವೀರ್ಯವರ್ಧಕವೂ ಆಗುತ್ತದೆ.
  8. ಬಾಳೆಹಣ್ಣನ್ನು ಕ್ರಮವಾಗಿ ಬಳಸುವುದರಿಂದ ಮೈಯಲ್ಲಿನ ಮಾಂಸ ವೃದ್ಧಿಯಾಗುವುದು, ಮಲಬದ್ಧತೆಯು ನಿವಾರಣೆಯಾಗುವುದು.
  9. ಮೂತ್ರ ವಿಸರ್ಜನೆ ಸರಿಯಾಗಿ ಆಗದಿದ್ದಲ್ಲಿ ಬಾಳೆಹೂವಿನ ರಸವನ್ನು ಸೌತೆಕಾಯಿ ರಸದೊಂದಿಗೆ ಬೆರೆಸಿ ಸೇವಿಸಿದರೆ ಶೀಘ್ರವಾಗಿ ಗುಣ ಕಂಡುಬರುವುದು.
  10. ಕರಳಿನಲ್ಲಿರುವ ವಿಷ ಕ್ರಿಮಿಗಳನ್ನು ನಾಶಪಡಿಸಲು ಬಾಳೆದಿಂಡಿನ ಪಲ್ಯವನ್ನು ಅಪರೂಪವಾಗಿ ತಿನ್ನಬೇಕು.
  11. ಬಾಳೆ ಎಲೆಯ ಭಸ್ಮವನ್ನು ಜೇನುತುಪ್ಪದೊಡನೆ ಸೇವಿಸಿದರೆ ಬಿಕ್ಕಳಿಕೆ ದೂರವಾಗುವುದು.
  12. ಗಾಂಜಾ, ಅಫೀಮು ಸೇವಿಸಿ ಉಂಟಾಗಿರುವ ಹಾನಿಯನ್ನು ನಿವಾರಿಸಲು ಬಾಳೆದಿಂಡಿನ ರಸವನ್ನು ಬಳಸಬೇಕು.
  13. ಮೈನೆರೆದ ಹುಡುಗಿಯರಲ್ಲಿ ಹೆಚ್ಚು ರಕ್ತಸ್ರಾವವಾಗುತ್ತಿದ್ದರೆ ಬಾಳೆ ಹೂವಿನ ರಸವನ್ನು ಮೊಸರಿನಲ್ಲಿ ಕೊಡುವುದರಿಂದ ಬಹುಬೇಗ ಗುಣವಾಗುವುದು.
  14. ಬಾಳೆಕಾಯಿಯನ್ನು ಬಿಸಿ ಬೂದಿಯಲ್ಲಿ ಸುಟ್ಟು ತಿನ್ನುವುದರಿಂದ ರಕ್ತಭೇದಿ ತಕ್ಷಣವೇ ನಿಲ್ಲುವುದು.
  15. ಬಾಳೆಹಣ್ಣಿನ ತಿರುಳನ್ನು ಹಸುವಿನ ಹಾಲಿನಲ್ಲಿ ಅರೆದು ಅದಕ್ಕೆ ಬಾಳೆಹೂವಿನ ರಸವನ್ನು ಕೂಡಿಸಿ 50 ದಿನಗಳು ಸೇವಿಸುವುದರಿಂದ ಶಾರೀರಿಕ ತೂಕವು ಕಡಿಮೆಯಾಗಿ ಸ್ಥೂಲಕಾಯರು ತೆಳ್ಳಗೆ ಆಗುತ್ತಾರೆ.
  16. ನರಗಳ ದುರ್ಬಲತೆಯಿಂದ ಉಂಟಾಗುವ ಉನ್ಮಾದ ಅಪಸ್ಮಾರ ರೋಗಗಳಿಗೆ ಬಾಳೆಮರದ ಕಾಂಡದಿಂದ ರಸ ಹಿಂಡಿ ಎಳನೀರಿನೊಂದಿಗೆ ಕುಡಿಸಿದರೆ ಉತ್ತಮವಾಗುತ್ತದೆ.
  17. ಬಾಳೆದಿಂಡಿನ ಪಲ್ಯ ಸೇವಿಸುವುದರಿಂದ ರಕ್ತಾತಿಸಾರದಲ್ಲಿ ಗುಣ ಕಂಡು ಬರುತ್ತದೆ. ಕರುಳಿನಲ್ಲಿ ಇರಬಹುದಾದ ವಿಷಕ್ರಮಿಗಳನ್ನು ನಾಶಪಡಿಸಿ ದೇಹದ ಆರೋಗ್ಯವನ್ನು ಕಾಪಾಡುತ್ತದೆ.
  18. ನಮ್ಮೆಲ್ಲರ ಕಾಡುವ ಖಿನ್ನತೆಗೆ ಮಾತ್ರೆಗಳ ಮೊರೆಹೋಗುವಬದಲು, ದಿನಕ್ಕೊಂದು ಬಾಳಿಹಣ್ಣಿನ ಸೇವನೆಯಿಂದ ಉಪಶಮನಪಡೆಯಬಹುದು.
  19. ಬಾಳೆದಿಂಡಿನ ಪಲ್ಯ ತಿನ್ನುವುದರಿಂದ ಮೂತ್ರಕೋಶದಲ್ಲಿನ ಕಲ್ಲು ಕರಗುತ್ತದೆ.
  20. ಹಾಲಿನ ಜೊತೆಗೆ ಬಾಳೆಹಣ್ಣು ಸೇರಿಸಿ ಮಕ್ಕಳಿಗೆ ಕೊಡುವುದರಿಂದ ರುಚಿಯ ಜೊತೆಗೆ ದಿನದ ಪೌಷ್ಟಿಕಾಂಶ ಸಿಗುತ್ತದೆ.
  21. ಬಾಳೆಹಣ್ಣಿನ ಸಿಪ್ಪೆಯಿಂದ ಹಲ್ಲುಜ್ಜಿಕೊಂಡರೆ ಹಳದಿಗಟ್ಟಿದ ಹಲ್ಲು ಬಿಳುಪಾಗುತ್ತದೆ.
  22. ಬಾಳೆಹಣ್ಣಿನ ಸಿಪ್ಪೆ ಯಿಂದ ಮೊಡವೆ ಉಜ್ಜದರೆ ಮೊಡವೆ ಕಡಿಮೆಯಾಗುತ್ತದೆ.
  23. ಸೊಳ್ಳೆ ಕಚ್ಚಿದ ಜಾಗವನ್ನು ಬಾಳೆಹಣ್ಣಿನ ಸಿಪ್ಪೆಯಿಂದ ಉಜ್ಜಿದಾಗ ಕಡಿತ ಕಡಿಮೆಯಾಗುತ್ತದೆ.
  24. ಬಾಳೆಹಣ್ಣನ್ನು ಹಾಲಿನೊಂದಿಗೆ ಸೇರಿಸಿ ಕುಡಿಯುವುದರಿಂದ ಗ್ಯಾಸ್ಟ್ರಿಕ್‌ ಸಮಸ್ಯೆ ಕಡಿಮೆಯಾಗುತ್ತದೆ.

ಅಂಶಗಳು

ಬಾಳೆಹಣ್ಣಿನಲ್ಲಿ 110 ಕ್ಯಾಲರಿ, 5 ಗ್ರಾಂ ಕೊಬ್ಬು, 27 ಗ್ರಾಂ ಕಾರ್ಬ್ರೋಹೈಡ್ರೇಟ್ಸ್, 3 ಗ್ರಾಂ ನಾರಿನಾಂಶ, 14 ಗ್ರಾಂ ಸಕ್ಕರೆ, ಶೇ.25ರಷ್ಟು ವಿಟಮಿನ್ ಬಿ6, 1 ಗ್ರಾಂ ಪ್ರೋಟೀನ್, ಶೇ. 16ರಷ್ಟು ಮ್ಯಾಂಗನೀಸ್, ಶೇ.14ರಷ್ಟು ವಿಟಮಿನ್ ಸಿ, ಶೇ. 12ರಷ್ಟು ನಾರಿನಾಂಶ, ಶೇ. 10ರಷ್ಟು ಬಿಯೊಟಿನ್, ಶೇ. 10ರಷ್ಟು ತಾಮ್ರ ಮತ್ತು ಶೇ.8ರಷ್ಟು ಮ್ಯಾಂಗನೀಸ್ ಇದೆ. ಅದರಿಂದ ಎಲ್ಲಾ ವಯೋಮಾನದವರು ಸೇವಿಸಬಹುದು.ಜೊತೆಗೆ ಇದು ಎಲ್ಲಾ ಕಾಲದಲ್ಲೂ ಸಿಗುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version