ದಿನದ ಸುದ್ದಿ
ಬಂಡೀಪುರ ಅರಣ್ಯ ಕಾಡ್ಗಿಚ್ಚು ಕಡಿಮೆಯಾಗುತ್ತಿದೆ : ಎಎನ್ಐ
ಸುದ್ದಿದಿನ ಡೆಸ್ಕ್ : ನಾಲ್ಕುದಿನಗಳಿಂದ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಕಂಡು ಬಂದಿದ್ದ ಕಾಡ್ಗಿಚ್ಚು, ಅಪಾರ ಪ್ರಮಾಣದ ಅರಣ್ಯ ಸಂಪತ್ತನ್ನು ಸುಟ್ಟು ಭಸ್ಮ ಮಾಡಿದೆ.
ಇನ್ನೆಂದೂ ಕಂಡರಿಯದಂತಹ ಈ ಕಾಡ್ಗಿಚ್ಚು ತನ್ನ ಕೆನ್ನಾಲಿಗೆಯನ್ನ ಚಾಚುತ್ತಲೇ ಇತ್ತು. ಈ ನಡುವೆ ಅರಣ್ಯ ಇಲಾಖೆ, ರಾಜ್ಯ ಸರ್ಕಾರ ಕಾಡ್ಗಿಚ್ಚು ನಂದಿಸಲು ವಾಯುಸೇನೆಯ ಎಲಿಕಾಫ್ಟರ್ ಗಳನ್ನು ಬಳಸಿ ತಮ್ಮ ಕಾರ್ಯ ನಿವರ್ಹಿಸಿದೆ.
ಇನ್ನು ಕರ್ನಾಟಕದ ಜನತೆ ಹಾಗೂ ಸ್ಯಾಂಡಲ್ ವುಡ್ ನ ನಾಯಕರುಗಳು ಕಾಡ್ಗಿಚ್ಚು ನಂದಿಸಲು ತಮ್ಮ ಅಭಿಮಾನಿಗಳಿಗೆ ಸ್ವಯಂಸೇವಕರಾಗಿ ತೆರಳಲು ಮನವಿಮಾಡಿದ್ದರು. ನಟ ದುನಿಯಾ ವಿಜಯ್ ಪತ್ನಿಯೊಡಗೂಡಿ ತಮ್ಮ ಅಭಿಮಾನಿಗಳನ್ನು ಕಾಡ್ಗಿಚ್ಚು ಅರಣ್ಯಪ್ರದೇಶಕ್ಕೆ ಕರೆದೊಯ್ದು ಸ್ವಯಂಸೇವಕರಾಗಿ ಕೆಲಸಮಾಡಿದರು. ಜತೆಗೆ ಅಲ್ಲಿನ ಅರಣ್ಯ ಅಧಿಕಾರಿಗಳು ಹಾಗೂ ಸ್ವಯಂ ಸೇವಕರಿಗೆ ಊಟದ ಸಾಮಗ್ರಿ ಮತ್ತು ಕುಡಿಯುವ ನೀರಿನ ಬಾಟಲ್ ಅನ್ನು ಜೊತೆಗೆ ಒಯ್ಯವುದರ ಮೂಲಕ ತಮಗಾದಷ್ಟು ಸಹಾಯ ಮಾಡಿದ್ದಾರೆ.
ಅಂದ ಹಾಗೆ ಇಂದು ಬೆಳಗಿ ಜಾವದಿಂದ ಅರಣ್ಯ ಪ್ರದೆರಶದಲ್ಲಿ ಕಾಡ್ಗಿಚ್ಚು ತಣ್ಣಗಾಗುತ್ತಾ ಬಂದಿದೆ ಎಂದು ಎಎನ್ಐ (ANI) ಸುದ್ದಿಸಂಸ್ಥೆ ತಿಳಿಸಿದೆ.
#Karnataka: Visuals from Bandipur forest area, where fire is under control now. pic.twitter.com/aa7ES4ulmw
— ANI (@ANI) February 27, 2019
ಸುದ್ದಿದಿನ.ಕಾಂ|ವಾಟ್ಸಾಪ್|9986715401