ದಿನದ ಸುದ್ದಿ
ಬಂಡೀಪುರ ಅರಣ್ಯಪ್ರದೇಶದಲ್ಲಿ ‘ಸೆಲ್ಫಿ’ ತೆಗೆದರೆ ದುಬಾರಿ ದಂಡ ವಿಧಿಸಲಾಗುವುದು..!
ಸುದ್ದಿದಿನ ಡೆಸ್ಕ್ : ಬಂಡೀಪುರ ಅರಣ್ಯ ಪ್ರದೇಶದಲ್ಲಿ ದಿನೇ ದಿನೇ ಪ್ರವಾಸಿಗರ ಹೆಚ್ಚುತ್ತಿದೆ. ಆದ್ದರಿಂದ ಅರಣ್ಯ ಇಲಾಖೆ ಹಾಗೂ ಸರ್ಕಾರ ಜತೆಗೂಡಿ ಪ್ರಾಣಿ,ಪಕ್ಷಿಗಳಿಗೆ ತೊಂದರೆಯುಂಟಾದಂತೆ ಕೆಲವು ಕಾನೂನುಗಳನ್ನು ಹೊರಡಿಸಿದೆ. ಕಾನೂನುವಿಧಿಸಿಯಾಗ್ಯೂ ಅವುಗಳ ಉಲಂಘನೆಯ ಪ್ರಕರಣಗಳು ಹೆಚ್ಚಿವೆ.
ಅಲ್ಲಿರುವ ಪ್ರಾಣಿಗಳಿಗೆ ಆಹಾರ ಕೊಡುವುದು, ಧೂಮಪಾನ, ಮದ್ಯಪಾನ ಮಾಡುವುದು, ಹೇಗೆಂದರೆ ಹಾಗೆ ಪ್ಲಾಸ್ಟಿಕ್ ವಸ್ತುಗಳನ್ನು ಬಿಸಾಕುವುದು,ಜೋರಾಗಿ ವಾಹನಗಳ ಹಾರನ್ ಮಾಡುವುದು, ಸೆಲ್ಫೀ ತೆಗೆದುಕೊಳ್ಳುವುದು ಮಾಡಿದರೆ 1 ರಿಂದ 2 ಸಾವಿರ ರೂಪಾಯಿ ದಂಡವಿಧಿಸಲಾಗುತ್ತಿದೆ.
ಏಪ್ರಿಲ್-ಮೇ ತಿಂಗಳಲ್ಲಿ ಪ್ರತಿವರ್ಷ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಅರಣ್ಯ ಇಲಾಖೆಯ ಕಾನೂನು ಉಲಂಘಿಸುವ ಸಾರ್ವಜನಿಕರೂ ಹೆಚ್ಚಾಗಿದ್ದಾರೆ. ಅದರಲ್ಲೂ ಮೈಸೂರು-ಮನನಂತವಾಡಿ ಹಾಗೂ ಗುಂಡ್ಲುಪೇಟೆ- ಸುಲ್ತಾನ್ ಬತೇರಿಯ ಹೆದ್ದಾರಿಗಳಲ್ಲಿ ನಿಯಮ ಉಲ್ಲಂಘನೆ ಹೆಚ್ಚಾಗಿದ್ದು, ಇಲಾಖೆ ದಂಡ ವಿಧಿಸುತ್ತಿದೆ.
ಅರಣ್ಯ ಇಲಾಖೆಯು ಈ ನಿಯಮಗಳನ್ನು ಜಾರಿಮಾಡಿದಾಗಿನಿಂದ ಪ್ರತಿದಿನ ಸುಮಾರು 12 ರಿಂದ 15 ರೂಪಾಯಿ ಸಂಗ್ರಹವಾತ್ತಿದೆ ಎಂದು ಅರಣ್ಯ ಅಧಿಕಾರಿ ತಿಳಿಸಿದ್ದಾರೆ.