ದಿನದ ಸುದ್ದಿ
ನವೆಂಬರ್‌ನಲ್ಲಿ ‘ಬೆಂಗಳೂರು ಟೆಕ್ ಸಮಾವೇಶ’ : ಸಿಎಂ ಬೊಮ್ಮಾಯಿ
ಸುದ್ದಿದಿನ, ಬೆಂಗಳೂರು : ಬರುವ ನವೆಂಬರ್‌ನಲ್ಲಿ ಬೆಂಗಳೂರು ಟೆಕ್ ಸಮಾವೇಶ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಟೆಕ್ ಶೃಂಗ ಸಮಾವೇಶ-2022ರ ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾವೇಶಕ್ಕೆ 25 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಂತೆ ಸಮಾವೇಶ ನಡೆಸಲು ಸರ್ಕಾರ ತೀರ್ಮಾನಿಸಿದೆ ಎಂದರು.
ಬೆಂಗಳೂರನ್ನು ಹೊರತುಪಡಿಸಿ ಎರಡು ಮತ್ತು ಮೂರನೇ ಹಂತಗಳಲ್ಲೂ ಐಟಿ ಉದ್ಯಮ ಬೆಳೆಯಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಬೆಂಗಳೂರು ಸೇರಿದಂತೆ ಐಟಿ ಉದ್ಯಮ ಸ್ಥಾಪನೆ ಮಾಡುವ ಎಲ್ಲ ನಗರಗಳಲ್ಲಿ ಅಗತ್ಯ ಮೂಲಸೌಲಭ್ಯ ಒದಗಿಸಲು ಸರ್ಕಾರ ವಿಶೇಷ ಗಮನಹರಿಸಲಿದೆ. ಪ್ರಮುಖ ಐಟಿ ಕಂಪನಿಗಳ ಸಿಇಒಗಳು ಅನೇಕ ಸಲಹೆ-ಸೂಚನೆ ನೀಡಿದ್ದು, ಅವುಗಳನ್ನು ಅನುಷ್ಠಾನ ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಟೆಕ್ ಶೃಂಗಸಭೆಯ ಥೀಮ್ ಬಿಡುಗಡೆ ಮಾಡಲಾಯಿತು. ಐಟಿ-ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಸಮಾವೇಶದ ಕಿರು ಹೊತ್ತಿಗೆ ಬಿಡುಗಡೆ ಮಾಡಿದರು. ಐಟಿ ದಿಗ್ಗಜರಾದ ಕ್ರಿಸ್ ಗೋಪಾಲಕೃಷ್ಣ ಹಾಗೂ ಅನೇಕ ಸಿಇಒಗಳು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243