ಕ್ರೀಡೆ

ಬ್ಯಾಂಕಾಕ್‌ ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿ : ಇತಿಹಾಸ ನಿರ್ಮಿಸಿದ ಭಾರತ ತಂಡದ ಆಟಗಾರರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ

Published

on

ಸುದ್ದಿದಿನ ಡೆಸ್ಕ್ : ಬ್ಯಾಂಕಾಕ್‌ನಲ್ಲಿ ನಡೆದ ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿ ಗೆದ್ದು, ಇತಿಹಾಸ ನಿರ್ಮಿಸಿದ ಭಾರತ ತಂಡದ ಆಟಗಾರರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.

ತಂಡದ ಆಟಗಾರರೊಂದಿಗೆ ಈ ಐತಿಹಾಸಿಕ ಸಾಧನೆಯ ಕುರಿತು ಮಾತನಾಡಿರುವ ಪ್ರಧಾನಮಂತ್ರಿಯವರು ಎಲ್ಲರಿಗೂ ಅಭಿನಂದನೆ ಸಲ್ಲಿಸಿ ದೇಶೀಯ ಕ್ರೀಡೆಯಲ್ಲಿ ಇದೊಂದು ಆಕರ್ಷಣೀಯ ಗೆಲುವಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಪ್ರತಿಯೊಬ್ಬ ಆಟಗಾರ ಪ್ರತಿಷತ 100ರಷ್ಟು ಸಾಮರ್ಥ್ಯ ತೋರಿದ್ದು, ತಂಡದ ಸ್ಫೂರ್ತಿಗೆ ನಿದರ್ಶನವಾಗಿದೆ. ಜೊತೆಗೆ ತರಬೇತುದಾರರು ಸಹ ಈ ಗೆಲುವಿಗೆ ಅರ್ಹರು ಎಂದು ಪ್ರಧಾನಿಯವರು ಈ ಸಂದರ್ಭದಲ್ಲಿ ಹೇಳಿದರು.

ಎಲ್ಲಾ ಆಟಗಾರರು ಸ್ವದೇಶದಿಂದ ಹಿಂತಿರುಗಿದ ಬಳಿಕ ತಮ್ಮ ಕೋಚ್‌ಗಳೊಂದಿಗೆ ನಿವಾಸಕ್ಕೆ ಆಗಮಸುವಂತೆಯೂ ಆಹ್ವಾನ ನೀಡಿರುವ ನರೇಂದ್ರ ಮೋದಿಯವರು ಅನೇಕ ಆಟಗಾರರ ಅನುಭವವನ್ನು ಕೇಳಿ ತಿಳಿದುಕೊಂಡರು.

ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್‌ನಲ್ಲಿ ಭಾರತದ ಪುರುಷರ ತಂಡ 14 ಬಾರಿಯ ಚಾಂಪಿಯನ್ ಇಂಡೋನೇಷಿಯಾ ತಂಡದ ವಿರುದ್ಧ 3-0 ಅಂಕಗಳಿಂದ ಜಯಗಳಿಸಿ ಈ ಐತಿಹಾಸಿಕ ಸಾಧನೆ ಮಾಡಿತ್ತು.

 

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version