ದಿನದ ಸುದ್ದಿ
ರಸ್ತೇಲಿ ಹಣ ಬಿದ್ದಿದ್ರೂ ಮುಟ್ಟಲಿಲ್ಲ ಜನ ; ಆದ್ರೆ ಆಮೇಲಾಗಿದ್ದೇ ಬೇರೆ..!?
ಸುದ್ದಿದಿನ, ಬೆಂಗಳೂರು : ಕುಮಾರಪಾರ್ಕ್ ರೈಲ್ವೇ ಸಮಾನಂತರ ರಸ್ತೆಯಲ್ಲಿ ಬಿದ್ದಿದ್ದ ನೋಡು ಕಂಡು ವಾಕಿಂಗ್ ಬಂದ ಜನರು ಬೆಚ್ಚಿಬಿದ್ದಿರುವ ವಿಚಿತ್ರ ಘಟನೆ ನಗರದಲ್ಲಿ ನಡೆದಿದೆ.
ಘಟನೆ ವಿವರ
ಕೊರೋನಾ ಸೋಂಕು ಹರಡುವ ಸಲುವಾಗಿ ಯಾರೋ ರಸ್ತೆಗೆ ನೋಟನ್ನು ಎಸೆದಿದ್ದಾರೆಂದು ತಿಳಿದ ಜನರು, ಭೀತಿ-,ಅನುಮಾನದಿಂದ
ರಸ್ತೆಯಲ್ಲಿ ನೋಟುಗಳನ್ನು ಮಟ್ಟಲು ಹೆದರಿದ್ದಾರೆ.
ನಂತರ ಮಾಹಿತಿ ತಿಳಿದ ಶೇಷಾದ್ರಿಪುರಂ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಆ ಕೂಡಲೇ ದುಡ್ಡು ಕಳೆದುಕೊಂಡಿದ್ದ ದಂಪತಿ ಸ್ಥಳಕ್ಕೆ ಬಂದು ಹಣ ಕಳೆದುಕೊಂಡಿರುವುದಾಗಿ ಹೇಳಿದ್ದಾರೆ. ನಂತರ ಆ ಹಣವನ್ನು ದಂಪತಿಗೆ ಹಣ ನೀಡಿ ಪೊಲೀಸರು ಅವರನ್ನು ಕಳಿಸಿಕೊಟ್ಟಿದ್ದಾರೆ. ನಂತರ ಆತಂಕದಿಂದ ದೂರಾಗಿ ನಿಟ್ಟುಸಿರು ಬಿಟ್ಟಿದ್ದಾರೆ ಕುಮರಪಾರ್ಕ್ ಜನ.
ಸುದ್ದಿದಿನ.ಕಾಂ|ವಾಟ್ಸಾಪ್|9980346243