ದಿನದ ಸುದ್ದಿ
ಸಾಕ್ಸ್ ಒಳಗೆ ಡ್ರಗ್ಸ್ ಇಟ್ಟು ಮಾರುತ್ತಿದ್ದ ವಿದೇಶಿಗರ ಬಂಧನ
ಸುದ್ದಿದಿನ ಡೆಸ್ಕ್ : ಶೂ ಸಾಕ್ಸ್ ಒಳಗಡೆ ಡ್ರಗ್ಸ್ ಇಟ್ಟು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬೆಂಗಳೂರಿನ ಕೋರಮಂಗಲ ಪೊಲೀಸರು ಸೆರೆಹಿಡಿದಿದ್ದಾರೆ.
ಜಾನ್ ಕೆನಾಡಿ. ಅಡ್ಲೆ . ಆದಿತ್ಯ ಬಂಧಿತರಾಗಿದ್ದು,
ಬಂಧಿತ ಜಾನ್ ಕೆನಾಡಿ. ಅಡ್ಲೆ.ನೈಜೀರಿಯಾ ಮತ್ತು ಕಾಂಗೋ ಪ್ರಜೆಗಳಾಗಿದ್ದಾರೆ. ಕೋರಮಂಗಲ 8 ನೇ ಬ್ಲಾಕ್ ನಲ್ಲಿ ಕಾಲೇಜ್ ವಿದ್ಯಾರ್ಥಿಗಳಿಗೆ ಹಾಗೂ ಸಾಫ್ಟ್‌ವೇರ್ ಉದ್ಯೋಗಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಒಂದು ಲಕ್ಷ ಬೆಲೆ ಬಾಳುವ ಡ್ರಗ್ಸ್ ವಶಪಡಿಸಿಕೊಂಡಿರೋ ಪೊಲೀಸರು, ಕೋರಮಂಗಲ ಇನ್ಸ್ಪೆಕ್ಟರ್ ಬಿ.ಎಸ್.ಮಂಜುನಾಥ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401