/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಬ್ಯಾಂಕ್ ಪಾಸ್ ಬುಕ್, ಎಟಿಎಂ ಬಳಸದೆ ಹಣ ಡ್ರಾ ಮಾಡಿದ ಖದೀಮರು..!

Published

on

ಸುದ್ದಿದಿನ, ಮೈಸೂರು : ಬ್ಯಾಂಕ್ ನ ಪಾಸ್ ಬುಕ್ ಮತ್ತು ಎಟಿಎಂ ಬಳಸದೆ ಖದೀಮರು ಹಣ ಡ್ರಾ ಮಾಡಿ ವ್ಯಕ್ತಿಯೊಬ್ಬರಿಗೆ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ನಗರದ ರಾಮಕೃಷ್ಣ ನಗರದ ನಿವಾಸಿ ಪ್ರಶಾಂತ್ ಕುಮಾರ್ ಎಂಬುವವರ ಖಾತೆಯಿಂದ ಹಣ ವನ್ನು ಖದೀಮರು ಹಣ ಡ್ರಾಮಾಡಿದ್ದಾರೆ. ಬ್ಯಾಂಕ್ ಪಾಸ್ ಬುಕ್ ಹಾಗೂ ಎಟಿಎಂ ತನ್ನ ಬಳಿಯಿದ್ದರೂ ಹಣ ಡ್ರಾ ಆಗಿರುವುದ ಕಂಡು ಪ್ರಶಾಂತ್ ಗಾಬರಿಯಾಗಿದ್ದಾರೆ. ಅವರ ಮೊಬೈಲ್ ಗೆ 31,250 ರೂ ಡ್ರಾ ಆಗಿರುವ ಮೆಸೇಜ್ ಬಂದಿದೆ ಅದನ್ನು ನೋಡಿದ ಪ್ರಶಾಂತ್ ಕಕ್ಕಾಬಿಕ್ಕಿಯಾಗಿದ್ದಾರೆ.

ಕೂಡಲೇ ಪ್ರಶಾಂತ್ ತನ್ನ ಖಾತೆಯಿರುವ ‘ಕೋಟಕ್ ಮಹೀಂದ್ರ ಬ್ಯಾಂಕ್’ ಗೆ ಹೋಗಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಎಟಿಎಂ ಬಳಸದೆ ಹಣ ಡ್ರಾ ಮಾಡಿದ್ದರಿವ ಕಳ್ಳರ ಬಂಧನಕ್ಕೆ ಸೈಬರ್ ಕ್ರೈಂ ಹಾಗೂ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version