ದಿನದ ಸುದ್ದಿ
‘ರೆಡ್ ಝೋನ್’ ದಾವಣಗೆರೆಯಲ್ಲಿ ಬೆಳ್ಳಂಬೆಳಗ್ಗೆಯಿಂದಲೇ ಎಣ್ಣೆಗಾಗಿ ಕ್ಯೂ ನಿಂತ ಜನ..!
ಸುದ್ದಿದಿನ, ದಾವಣಗೆರೆ : ಸರ್ಕಾರ ಎಲ್ಲಾ ಝೋನ್ ಗಳಲ್ಲೂ ಎಣ್ಣೆ ಖರೀದಿಸಲು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ನಗರದ ಮದ್ಯಪ್ರಿಯರು ಬೆಳ್ಳಂಬೆಳಗ್ಗೇಯಿಂದಲೇ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಎಣ್ಣೆಗಾಗಿ ಕ್ಯೂನಿಂತಿರುವ ದೃಶ್ಯಗಳು ಕಂಡುಬಂದವು.
ಬಾಗಿಲು ತೆರೆಯದ ಬಾರ್ ಗಳ ಮುಂದೆ ಬೆಳಗ್ಗೆ 7 ಗಂಟೆಯಿಂದಲೇ ಜನರು ಮುಖಮಾಡಿದ್ದರು. ಕೆಲವರು ಬೆಳಗ್ಗೆ 6 ಗಂಟೆಯಿಂದಲೇ ಬಾರ್ ಗಳ ಮುಂದೆ ಸುಳಿದಾಡುತ್ತಿದ್ದರು. ಲಾಕ್ ಡೌನ್ ಆರಂಭವಾದಾಗಿನಿಂದ ಬಾರ್ ಗಳು ಕ್ಲೋಸ್ ಆಗಿದ್ದು, ಮದ್ಯಪ್ರಿಯರಿಗೆ ಬೇಸರ ಉಂಟಾಗಿತ್ತು. ಎಣ್ಣೆ ಖರೀದಿಸಲು ಸರ್ಕಾರ ಅನುಮತಿ ನೀಡಿದ್ದೇ ಸಂಭ್ರಮದಲ್ಲಿದ ಅವರು, ಸೋಮವಾರದ ಬರುವಿಕೆಗಾಗಿ ಕಾಯುತ್ತಿದ್ದರು.
ಬಾರ್ ಗಳ ಮುಂದೆ ಬ್ಯಾರಿಕೇಡ್
ಬಾರ್ ಗಳ ಮಾಲೀಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಮದ್ಯಪ್ರಿಯರು ಈ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಮದ್ಯ ಖರೀದಿಸುವ ಜವಾಬ್ದಾರಿ ಅವರದಾಗಿದೆ.
ದಿನಕ್ಕೆ ಒಬ್ಬರು ಇಷ್ಟು ಎಣ್ಣೆ ಖರೀದಿಸಬಹುದು
ಒಬ್ಬ ವ್ಯಕ್ತಿಗೆ ಎರಡುವರೆ ಲೀಟರ್ ಲಿಕ್ಕರ್, ಬಿಯರ್ 9 ಲೀಟರ್ ಖರೀದಿಸಲು ಸರ್ಕಾರ ಅವಕಾಶ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243