ದಿನದ ಸುದ್ದಿ

ಜಗಜ್ಯೋತಿ ಬಸವಣ್ಣ ಜಯಂತಿ ಆಚರಣೆ

Published

on

ಸುದ್ದಿದಿನ,ಬಳ್ಳಾರಿ : ಜಿಲ್ಲಾಡಳಿತ ವತಿಯಿಂದ ಜಗಜ್ಯೋತಿ, ವಿಶ್ವ ಗುರು, ಭಕ್ತಿ ಭಂಡಾರಿ ಬಸವಣ್ಣನವರ ಜಯಂತಿಯನ್ನು ನಗರದ ಹೆಚ್.ಆರ್.ಗವಿಯಪ್ಪ ವೃತ್ತದಲ್ಲಿ ಮಂಗಳವಾರ ಸರಳವಾಗಿ ಆಚರಣೆ ಮಾಡಲಾಯಿತು.

ಲೋಕಸಭಾ ಚುನಾವಣಾ-2019 ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಬಸವಣ್ಣನವರ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಬಸವಣ್ಣನವರ ಪುತ್ಥಳಿಗೆ ಪೂಜೆ ಹಾಗೂ ಮಾಲಾರ್ಪಣೆಯನ್ನು ಮಾಡುವುದರ ಮುಖಾಂತರ ನಮನ ಸಲ್ಲಿಸಿದ್ದರು.

ಈ ಸಂದರ್ಭದಲ್ಲಿ ಜಿಪಂ ಸಿಇಒ ನಿತೀಶ್.ಕೆ, ಸಹಾಯಕ ಆಯುಕ್ತ ರಮೇಶ್ ಕೋನರೆಡ್ಡಿ, ಅಪರ ಪೊಲೀಸ್ ವರೀಷ್ಠಾಧಿಕಾರಿ ಲಾವಣ್ಯ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ನಾಗರಾಜ್, ಮಹಾನಗರ ಪಾಲಿಕೆ ಉಪ ಆಯುಕ್ತ ಭೀಮಪ್ಪ, ಪಾಲಿಕೆಯ ಕಾರ್ಯಪಾಲಕ ಅಭಿಯಂತರರಾದ ಖಾಜಾ ಮೊಹಮ್ಮದ್ದಿನ್, ವೀರಶೈವ ಸಂಘದ ಜಿಲ್ಲಾಧ್ಯಕ್ಷ ಯು.ಬಸವರಾಜ್, ಕಾರ್ಯದರ್ಶಿ ಕೊಟ್ರಪ್ಪ ಹಾಗೂ ಇತರೆ ಗಣ್ಯವ್ಯಕ್ತಿಗಳು ಸೇರಿದಂತೆ ಸಮಾಜದ ಮುಖಂಡರು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version