ದಿನದ ಸುದ್ದಿ

ಧಾರ್ಮಿಕ ಸಹಿಷ್ಣುತೆಗೆ ಹೊಸ ಭಾಷ್ಯ ಬರೆದ ಬಸವಣ್ಣ

Published

on

ಸುದ್ದಿದಿನ ಡೆಸ್ಕ್ : ಇಂದು ಬಸವ ಜಯಂತಿ. 12ನೇ ಶತಮಾನದ ಕ್ರಾಂತಿಕಾರಿ ವಿಚಾರಧಾರೆಯ ಬಸವಣ್ಣನ ಜನ್ಮದಿನ.

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯಲ್ಲಿ ಜನ್ಮತಳೆದ ಜಗದ್ಗುರು ಬಸವೇಶ್ವರರ ಬದುಕು, ಬರಹ, ಚಿಂತನೆಗಳು ಜಗದ್ವಿಖ್ಯಾತವಾಗಿದ್ದು, ವಿಶೇಷವಾಗಿ ಕನ್ನಡ ನಾಡಿನ ಜನರಿಗೆ ಪ್ರೇರಣೆಯಾಗಿದೆ.

ಕಾಯಕಕ್ಕೆ ಹೊಸ ಭಾಷ್ಯ ಬರೆದ ಬಸವೇಶ್ವರರು ಶೋಷಿತರಲ್ಲಿ ಜಾಗೃತಿ ಮೂಡಿಸಿದ ಮಹಾನ್ ಚೇತನ. ದಯೆಯೇ ಧರ್ಮದ ಮೂಲವಯ್ಯ ಎಂದು ಸಾರಿ, ಧಾರ್ಮಿಕ ಸಹಿಷ್ಣುತೆಗೆ ಹೊಸ ಭಾಷ್ಯ ಬರೆದಿದ್ದಾರೆ.

ಶರಣ ಸಂಸ್ಕೃತಿ ಹುಟ್ಟುಹಾಕಿ ಎಲ್ಲರನ್ನು ಪ್ರೀತಿಯಿಂದ ಅಪ್ಪಿದ ವಿಚಾರವಾದಿ ಎಂಬ ಹೆಗ್ಗಳಿಕೆಗೆ ಬಸವೇಶ್ವರರು ಪಾತ್ರರಾಗಿದ್ದಾರೆ. ಇಂದು ಅವರ ಜಯಂತಿಯನ್ನು ಎಲ್ಲೆಡೆ ವಿಶೇಷ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version