ದಿನದ ಸುದ್ದಿ

ಸನಾವುಲ್ಲಾ ನವಿಲೇಹಾಳ್ ‘ಪಂಜು’ ಕೃತಿಗೆ ಬಸವ ಪುರಸ್ಕಾರ

Published

on

ಸುದ್ದಿದಿನ,ದಾವಣಗೆರೆ : ಜಿಲ್ಲೆಯ ಚನ್ನಗಿರಿ ತಾಲೂಕಿನ ನವಿಲೇಹಾಳು ಗ್ರಾಮದ ಸನಾವುಲ್ಲಾ ನವಿಲೇಹಾಳ್ ಅವರ ‘ಪಂಜು’ ಕವನ ಸಂಕಲನಕ್ಕೆ ಕಲಬುರಗಿ ಯ ಪಾಳಾದ ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಬಸವ ಪುರಸ್ಕಾರ ನೀಡಿದೆ.

ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಹತ್ತೊಂಬತ್ತು ಸಾಹಿತಿಗಳ ಕೃತಿಗೆ ಬಸವ ಪುರಸ್ಕಾರ ನೀಡಿದ್ದು, ಮೇ 8 ರಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ‘ಬಸವ ಪುರಸ್ಕಾರ ಹಾಗೂ ವಚನಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸನಾವುಲ್ಲಾ ನವಿಲೇಹಾಳ್ ಅವರು ಪ್ರಸ್ತುತ ದಾವಣಗೆರೆಯ ವಿಶ್ವಬಂಧು ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸನಾವುಲ್ಲಾ ನವಿಲೇಹಾಳ್ ಅವರು ತಮ್ಮ ಚೊಚ್ಚಲ ಕೃತಿ ‘ಒಂಟಿ ಮರದ ಕೆಳಗೆ’ ಕವನ ಸಂಕಲನಕ್ಕೆ 2014 ರಲ್ಲಿ ಮಂಗಳೂರಿನ ಲೇಖಕರ ಸಂಘದಿಂದ ‘ ಮುಸ್ಲಿಂ ಸಾಹಿತ್ಯ ಪ್ರಶಸ್ತಿ’ ಪಡೆದಿದ್ದರು.

ಆಹ್ವಾನ ಪತ್ರಿಕೆ

ಬಸವ ಪುರಸ್ಕಾರ ಪಡೆದವರು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version