ದಿನದ ಸುದ್ದಿ

ತುಮಕೂರಿನ ಸಿದ್ದರ ಬೆಟ್ಟದಂತೆ ಬಾತಿ ಗುಡ್ಡವನ್ನು ಅಭಿವೃದ್ದಿಪಡಿಸಿಬಹುದಾಗಿದೆ : ಎಸ್ ಪಿ ಹನುಮಂತರಾಯ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ, ದಾವಣಗೆರೆ : ದಾವಣಗೆರೆ ಸಮೀಪವಿರುವ ಬಾತಿ ಗುಡ್ಡವನ್ನು ಅಭಿವೃದ್ದಿಪಡಿಸಿದರೆ ತುಮಕೂರಿನ ಸಿದ್ದರ ಬೆಟ್ಟದಂತೆ ಅಭಿವೃದ್ದಿಪಡಿಸಬಹುದಾಗಿದೆ. ಹಾಗೂ ಜಿಲ್ಲೆಯಲ್ಲಿ ಸಾಕಷ್ಟು ಜಲಮೂಲಗಳು ಇರುವುದರಿಂದ ಜೀವ ವೈವಿಧ್ಯತೆಗೆ ಒತ್ತು ನೀಡಬಹುದಾಗಿದೆ. ಇದರೊಂದಿಗೆ ಪ್ರಸಿದ್ದ ಸೂಳೆಕೆರೆ, ಕುಂದುವಾಡ ಕೆರೆಗಳನ್ನು ಅಭಿವೃದ್ದಿಪಡಿಸಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಹೇಳಿದರು.

ಮಂಗಳವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅರಣ್ಯ ಪರಿಸರ ಮತ್ತು ಜೀವ ವೈವಿಧ್ಯ ಸಂರಕ್ಷಣೆ ಕುರಿತಾದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೊಂಡಜ್ಜಿಯಲ್ಲಿರುವ ಪೊಲೀಸ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಸಾಕಷ್ಟು ಜಾಗವಿದ್ದು ಜೀವ ವೈವಿಧ್ಯವನ್ನು ಅಭಿವೃದ್ದಿಪಡಿಸಬಹುದಾಗಿದೆ. ಮಲೆಬೆನ್ನೂರು ಪೊಲೀಸ್ ಠಾಣೆಯ ಆವರಣದಲ್ಲಿ 10 ಎಕರೆ ಪ್ರದೇಶವಿದ್ದು ಈಗಾಗಲೇ ಅಲ್ಲಿನ ಸಿಬ್ಬಂದಿ ಔಷಧೀಯ ಸಸ್ಯಗಳನ್ನು ಬೆಳೆಸಿದ್ದಾರೆ ಎಂದಾಗ, ಅನಂತ ಹೆಗಡೆಯವರು ಈ ಕುರಿತು ಪತ್ರಿಕೆಗಳಲ್ಲಿ ಓದಿದ್ದೇನೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version