ದಿನದ ಸುದ್ದಿ

ರೈತಸಿರಿ ಯೋಜನೆ’ಯಡಿ ಸಿರಿಧಾನ್ಯ ಬೆಳೆದ ರೈತರಿಗೆ 16 ಕೋಟಿ 55 ಲಕ್ಷ ರೂಪಾಯಿ ನೇರ ನಗದು ವರ್ಗಾವಣೆ : ಸಚಿವ ಬಿ.ಸಿ. ಪಾಟೀಲ್

Published

on

ಸುದ್ದಿದಿನ ಡೆಸ್ಕ್ : 2021-22ನೇ ಸಾಲಿನಲ್ಲಿ ’ರೈತಸಿರಿ ಯೋಜನೆ’ಯಡಿ ಬೆಳೆ ಸಮೀಕ್ಷೆ ಆಧಾರದ ಮೇರೆಗೆ ಸಿರಿಧಾನ್ಯ ಬೆಳೆದ 18 ಸಾವಿರ 276 ಫಲಾನುಭವಿಗಳಿಗೆ 16ಕೋಟಿ 55 ಲಕ್ಷ ರೂಪಾಯಿ ನೇರ ನಗದು ವರ್ಗಾವಣೆ ಮಾಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 2022-23ನೇ ಸಾಲಿಗೆ ರೈತಸಿರಿ ಯೋಜನೆ ಮುಂದುವರೆಯಲಿದೆ. ರಾಜ್ಯದಲ್ಲಿ ಸಿರಿಧಾನ್ಯ ಬೆಳೆಗಾರರಿಗೆ ಉತ್ತೇಜನ ನೀಡಲು ಜಾರಿಗೊಳಿಸಿರುವ ’ರೈತ ಸಿರಿ ಯೋಜನೆ’ ಮೂಲಕ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತಿದೆ. ಪ್ರತಿ ಫಲಾನುಭವಿ ರೈತರಿಗೆ ಗರಿಷ್ಠ 2 ಹೆಕ್ಟೇರ್‌ವರೆಗೆ ಪ್ರೋತ್ಸಾಹಧನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version