ದಿನದ ಸುದ್ದಿ
ಸುಪ್ರೀಂ ಕೋರ್ಟ್ ಕೆಂಗಣ್ಣಿಗೆ ಗುರಿಯಾದ ರಾಜ್ಯ ಸರ್ಕಾರ; ಯಾಕೆಂದು ಗೊತ್ತಾ?
ಸುದ್ದಿದಿನ ಡೆಸ್ಕ್ : ದೆಹಲಿ ಕಸದಿಂದ ತುಂಬುತ್ತಿದೆ, ಮುಂಬೈ ಮಳೆ ನೀರಿನಿಂದ ಮುಳುಗುತ್ತಿದೆ. ಆದರೆ, ಈ ಸರ್ಕಾರಗಳು ಏನೂ ಮಾಡುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳನ್ನು ತರಾಟೆಗೆ ತೆಗೆದು ಕೊಂಡಿದ್ದು, ಸುಪ್ರೀಂ ಕೋರ್ಟ್‌ನ ಕೆಂಗಣ್ಣಿಗೆ ಕರ್ನಾಟಕ ಸೇರಿ ಹತ್ತು ರಾಜ್ಯ ಮತ್ತು ಎರಡು ಕೇಂದ್ರಾಡಳಿತ ಸರ್ಕಾರಗಳು ಗುರಿಯಾಗಿವೆ.
ರಾಜ್ಯ ಮತ್ತು ಕೇಂದ್ರಾಡಳಿತ ಸರ್ಕಾರಗಳು ಘನ ತ್ಯಾಜ್ಯ ನಿರ್ವಹಣೆ ಕಾರ್ಯತಂತ್ರ ಪಾಲಿಸಿಗಳನ್ನು ಸಲ್ಲಿಸಿಲ್ಲ. ಈ ಬಗ್ಗೆ ಸರ್ಕಾರ ಏನೂ ಕ್ರಮ ಕೈಗೊಂಡಿಲ್ಲ. ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ ಎಂದು ಕೋರ್ಟ್ ಮಧ್ಯೆ ಪ್ರವೇಶಿಸಿ ಜನರಿಗೆ ನೆರವಾಗುತ್ತಿಲ್ಲವಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿರಾದ ಎಂಬಿ ಲೋಕೂರ್ ಮತ್ತು ದೀಪಜ್ ಗುಪ್ತ ಒಳಗೊಂಡ ನ್ಯಾಯಪೀಠ ಇತ್ತೀಚೆಗೆ ದೆಹಲಿ ಆಡಳಿತ ಕುರಿತ ಕೋರ್ಟ್ ಪ್ರಶ್ನಿಸಿ, ನಾಳೆಯಿಂದ ದೆಹಲಿಯ ಮೂರು (ಒಖ್ಲಾ, ಭಲ್ಸ್ವಾ, ಘಜಿಪುರ್)
ಕಸದ ಪರ್ವತಗಳನ್ನು ತೆರವುಗೊಳಿಸುವ ಹೊಣೆ ಯಾರದು. ಲೆಫ್ಟಿನೆಂಟ್ ಗವರ್ನರ್ ಅವರದ್ದೋ ಅಥವಾ ದೆಹಲಿ ಸರ್ಕಾರದ್ದೋ ಎಂದು ಪ್ರಶ್ನಿಸಿದೆ.
ಘನತ್ಯಜ್ಯ ನಿರ್ವಹಣೆ ಕುರಿತು 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಿದ್ದ ಆದೇಶವನ್ನು ಪಾಲಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದೆ. ಘನ ತ್ಯಾಜ್ಯ ನಿರ್ವಹಣೆ ಕಾನೂನು ಜಾರಿಯಾಗಿ ಎರಡು ವರ್ಷಗಳಾದ್ರೂ ಕಾನೂನು ಜಾರಿಗೆ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಚಾಟಿ ಬೀಸಿದೆ.
ಒಂದು ಲಕ್ಷ ದಂಡ
ಪೂರ್ವಾದೇಶ ಪಾಲನೆ ಮಾಡದ 11 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ತಲಾ ಒಂದು ಲಕ್ಷ ದಂಡ ವಿಧಿಸಿದೆ. ಬಿಹಾರ, ಚಂಡಿಗಡ, ಗೋವಾ, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ, ಪಶ್ಚಿಮ ಬಂಗಾಳ, ಕೇರಳ, ಕರ್ನಾಟಕ, ಮೇಘಾಲಯ, ಪಂಜಾಬ್ ಮತ್ತು ಲಕ್ಷದ್ವೀಪ, ಪುದುಚೇರಿ ತ್ಯಾಜ್ಯ ನಿರ್ವಹಣೆ ಕುರಿತ ಅಫಿಡಾವಿಟ್ ಸಲ್ಲಿಸಿಲ್ಲ.
13 ರಾಜ್ಯ ಸರ್ಕಾರದ ಪರ ವಕೀಲರು ವಿಚಾರಣೆ ವೇಳೆ ಕೋರ್ಟ್‌ನಲ್ಲಿ ಹಾಜರಿಲ್ಲದ ಕಾರಣಕ್ಕೆ ತಲಾ ಎರಡು ಲಕ್ಷ ದಂಡವನ್ನು ವಿಧಿಸಿ ಕಪಾಳ ಮೋಕ್ಷ ಮಾಡಿದೆ. ಈ ದಂಡದ ಮೊತ್ತವನ್ನು ಎರಡು ವಾರದೊಳಗೆ ಸುಪ್ರೀಂ ಕೋರ್ಟ್‌ನ ಕಾನೂನು ಸೇವಾ ಸಮಿತಿಗೆ ಪಾವತಿಸಲು ಸೂಚನೆ ನೀಡಿದೆ.
13 ರಾಜ್ಯ ಸರ್ಕಾರಗಳಿಗೆ ತ್ಯಾಜ್ಯ ನಿರ್ವಹಣೆ ಕುರಿತು ಏನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲು ಅಂತಿಮವಾಗಿ ಒಂದು ಅವಕಾಶ ನೀಡಿದೆ. ಈ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮುಂದಿನ ಹೀಯರಿಂಗ್ ವೇಳೆ ಕೋರ್ಟ್ ಮುಂದೆ ಹಾಜರಾಗುವಂತೆ ತಾಕೀತು ಮಾಡಿದೆ. ಈ ವಿಷಯ ಕುರಿತ ವಿಚಾರಣೆಯನ್ನು ಆಗಸ್ಟ್ 7ಕ್ಕೆ ಮುಂದೂಡಿದೆ.
ಹರಿಯಾಣ, ಜಾರ್ಖಂಡ್, ಒರಿಸ್ಸ, ನಾಗಾ ಲ್ಯಾಂಡ್, ದಾದ್ರಾ ಮತ್ತು ನಾಗರ್ ಹವೇಲಿ, ಮತ್ತು ಅಂಡಮಾನ್, ನಿಕೊಬಾರ್ ಸರ್ಕಾರಗಳು ಅಫಿಡಾವಿಟ್ ಸಲ್ಲಿಸಿವೆ ಎಂದು ಕೋರ್ಟ್ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401