ದಿನದ ಸುದ್ದಿ

ಕರಡಿಗಳ ದಾಳಿ: ಯುವಕ ಗಂಭೀರ ಗಾಯ

Published

on

ಸುದ್ದಿದಿನ,ವಿಜಯನಗರ: ಜಮೀನಿಗೆ ನೀರು ಹಾಯಿಸಲು ಹೋದ ಯುವಕ ಮನೆಗೆ ವಾಪಸ್ಸು ಬರುವಷ್ಟರಲ್ಲಿ ಕರಡಿಗಳ ದಾಳಿಗೆ ಸಿಲುಕಿ ಗಾಯಗೊಂಡ ಘಟನೆ ಹರಪನಹಳ್ಳಿ ತಾಲೂಕಿನ ಕೆ.ಕಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ರಂಗಾಪುರ ಗ್ರಾಮದ 28 ವರ್ಷದ ಯುವಕ ಆನಂದ ಎಂಬುವಾತ ಕೆ.ಕಲ್ಲಹಳ್ಳಿ ಗ್ರಾಮದ ಸಂಬಂಧಿಕರ ಮನೆಯಲ್ಲಿದ್ದನು. ಮುಂಜಾನೆ ಎಂದಿನಂತೆ ಜಮೀನಿಗೆ ನೀರು ಹಾಯಿಸಲು ಹೋದ ಆತ ವಾಪಾಸು ಬರುವಾಗ ಕರಡಿಗಳ ದಾಳಿಗೆ ತುತ್ತಾಗಿದ್ದಾನೆ.

ದಾರಿ ಮಧ್ಯೆ ಹಳ್ಳದಲ್ಲಿ ಅವಿತು ಕುಳಿತ ಎರಡು ಕರಡಿಗಳು ಆನಂದನ ಬರುವಿಕೆಯನು ಕಂಡು ಆತನ ಮೇಲೆ ದಾಳಿ ನಡೆಸಿವೆ. ಈ ದಾಳಿಯಲ್ಲಿ ಆತನ ಮುಖ ಹಾಗೂ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version