ದಿನದ ಸುದ್ದಿ

ಭಾರತೀಯ ಭೂಸೇನಾಪಡೆ ನೂತನ ಮುಖ್ಯಸ್ಥರಾಗಿ ಜನರಲ್ ಮನೋಜ್ ಪಾಂಡೆ ಅಧಿಕಾರ ಸ್ವೀಕಾರ

Published

on

ಸುದ್ದಿದಿನ,ದೆಹಲಿ:ಭಾರತೀಯ ಭೂಸೇನಾಪಡೆಯ ನೂತನ ಮುಖ್ಯಸ್ಥರಾಗಿ ಜನರಲ್ ಮನೋಜ್ ಪಾಂಡೆ ಶನಿವಾರ ಅಧಿಕಾರ ಸ್ವೀಕರಿಸಿದರು.

ನಂತರ ಅವರು ಸೇನಾ ಪಡೆಗಳ ಪರಮೋಚ್ಛ ದಂಡನಾಯಕರೂ ಆದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಭವನದಲ್ಲಿ ಭೇಟಿಯಾದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನೂ ಸಹ ಜನರಲ್ ಪಾಂಡೆ ಭೇಟಿಯಾದರು.

ಇದಕ್ಕೂ ಮುನ್ನ ದೆಹಲಿಯ ಸೌತ್ ಬ್ಲಾಕ್‌ನಲ್ಲಿ ನೂತನ ಜನರಲ್ ಮನೋಜ್ ಪಾಂಡೆ ಮತ್ತು ನಿರ್ಗಮಿತ ಜನರಲ್ ಮನೋಜ್ ಮುಕುಂದ್ ನರವಣೆ ಅವರಿಗೆ ಸೇನಾಪಡೆಗಳಿಂದ ಗೌರವ ರಕ್ಷೆ ನೀಡಲಾಯಿತು.

ಜನರಲ್ ಮನೋಜ್ ಪಾಂಡೆ ಅವರು ಭಾರತೀಯ ಭೂಸೇನಾ ಪಡೆಯ 29ನೇ ಮುಖ್ಯಸ್ಥರಾಗಿದ್ದು, ಎಂಜಿನಿಯರ್‍ಸ್ ಕೋರ್‌ನಿಂದ ಈ ಸ್ಥಾನಕ್ಕೇರಿದ ಪ್ರಥಮ ಸೇನಾಧಿಕಾರಿಯಾಗಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version