ದಿನದ ಸುದ್ದಿ

ಉತ್ತರ ಪ್ರದೇಶ: ಗೋಹತ್ಯೆ ವದಂತಿ ಹಿಂಸಾಚಾರಕ್ಕೆ ಒಂದು ಬಲಿ

Published

on

ಸುದ್ದಿದಿನ, ನವದೆಹಲಿ: ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಗೋಹತ್ಯೆ ಬಗ್ಗೆ ಹರಿದಾಡುತ್ತಿರುವ ವದಂತಿಯಿಂದ ಭುಗಿಲೆದ್ದ ಹಿಂಸಾಚಾರಕ್ಕೆ ಪೊಲೀಸ್ ಅಧಿಕಾರಿಯೊಬ್ಬ ಬಲಿಯಾಗಿದೆ. ಪ್ರತಿಭಟನಕಾರರು ಮತ್ತು ಪೊಲೀಸರ ನಡುವಿನ ಘರ್ಷಣೆಯಲ್ಲಿ ಎಸ್‌ಐ ಮೃತಪಟ್ಟಿದ್ದಾರೆ ಎಂದು ಬುಲಂದ್‌ಶಹರ್‌ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅನುಜ್‌ ಝಾ ತಿಳಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಅಕ್ರಮ ಕಸಾಯಿಖಾನೆಯಲ್ಲಿ ಗೋಹತ್ಯೆ ನಡೆಯುತ್ತಿದೆ ಎಂದು ಆರೋಪಿಸಿ ಕೆಲವರು ದನದ ಶವವನ್ನು ಮುಂದಿಟ್ಟುಕೊಂಡು ಬುಲಂದ್‌ಶಹರ್‌ ಸಿಯಾನಾ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾಕಾರರು ವಾಹನಗಳ ಮೇಲೆ ಕಲ್ಲು ತೂರಿ ಹಲವು ಮೋಟಾರ್‌ ಬೈಕ್‌ಗಳಿಗೆ ಬೆಂಕಿ ಹಚ್ಚಿದ್ದರಿಂದ ಘಟನೆ ವಿಕೋಪಗೊಂಡು ಹಿಂಸಾಚಾರಕ್ಕೆ ತಿರುಗಿತು. ಕೆಲವರು ಪೊಲೀಸ್‌ ಅಧಿಕಾರಿಗಳ ಮೇಲೆ ದಾಳಿ ನಡೆಸಿದರು.

ಈ ಹಿಂಸಾಚಾರದ ವೇಳೆ ಸಿಯಾನಾ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಸುಬೋಧ್‌ ಸಿಂಗ್‌  ಮತ್ತು ಇತರ ನಾಲ್ವರು ಕಾನ್‌ಸ್ಟೆಬಲ್‌ಗ‌ಳು ಗಾಯಗೊಂಡರು. ಆದರೆ ತೀವ್ರವಾಗಿ ಗಾಯಗೊಂಡ ಇನ್ಸ್‌ಪೆಕ್ಟರ್‌ ಸುಬೋಧ್‌ ಸಿಂಗ್‌ ಅವರನ್ನು ಔರಂಗಾಬಾದ್‌ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದುವ ವೇಳೆಯೇ ಸಾವನ್ನಪ್ಪಿದ್ದರು ಎಂದು ವರದಿ ಮಾಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version