ದಿನದ ಸುದ್ದಿ
ಖಂಡ್ರೆ ಮಾತಿಗೆ ಒಲಿದ ಲಕ್ಷ್ಮೀ ಹೆಬ್ಬಾಳಕರ್; ಸಮ್ಮಿಶ್ರ ಸರ್ಕಾರ ಸೇಫ್
ಸುದ್ದಿದಿನ ಡೆಸ್ಕ್: ಕಳೆದ ಹಲವು ದಿನಗಳಿಂದ ಬೆಳಗಾವಿಯ ಜಾರಕಿಹೊಳಿ ಸಹೋದರರು ಮತ್ತು ಲಕ್ಷ್ಮೀ ಹೆಬ್ಬಾಳಕರ್ ನಡುವೆ ಏರ್ಪಟ್ಟಿದ್ದ ಭಿನ್ನಮತ ಶಮನವಾಗುವ ಲಕ್ಷಣ ಕಾಣುತ್ತಿದ್ದು, ಶುಕ್ರವಾರ ಕಾಂಗ್ರೆಸ್ ಹಿರಿಯ ಮುಖಂಡ ಈಶ್ವರ ಖಂಡ್ರೆ ಲಕ್ಷ್ಮೀ ಹೆಬ್ಬಾಳಕರ್ ಮನವೊಲಿಸಿದ್ದಾರೆ. ಈ ಮೂಲಕ ಸಮ್ಮಿಶ್ರ ಸರ್ಕಾರ ಸೇಫ್ ಆಗುತ್ತಿದೆ.
ಜಾರಕಿಹೊಳಿ ಸಹೋದರರು ಮತ್ತು ಹೆಬ್ಬಾಳಕರ್ ನಡುವಿನ ಭಿನ್ನಮತ ಸ್ಫೋಟ ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಕಂಟಕವಾಗಿ ಎದುರಾಗಿತ್ತು. ಇಬ್ಬರ ನಡುವಿನ ಜಗಳ ತಾರಕ್ಕೇರಿ ಸಮ್ಮಿಶ್ರ ಸರ್ಕಾರ ಪತನವಾಗುತ್ತದೆ ಎಂಬ ಆತಂಕ ಎದುರಾಗಿತ್ತು. ಇದೀಗ ಖಂಡ್ರೆ ಮಧ್ಯಸ್ಥಿಕೆಯಿಂದ ಭಿನ್ನಮತ ಶಮನವಾಗಿದೆ.
ಈಶ್ವರ ಖಂಡ್ರೆ ಅವರು ಮೂರು ಸೂತ್ರಗಳನ್ನು ಬಳಸಿ ಲಕ್ಷ್ಮೀ ಹೆಬ್ಬಾಳಕರ್ ಅವರ ಮನವೊಲಿಸಿದ್ದು, ಜಾರಕಿಹೊಳಿ ಸಹೋದರರು ಮತ್ತು ಹೆಬ್ಬಾಳಕರ್ ನಡುವಿನ ಭಿನ್ನಮತ ಶಮನವಾಗುತ್ತಿದೆ.
ಈತ್ತ ಕಾಂಗ್ರೆಸ್‌ನ ರಾಜ್ಯ ಹೈಕಮಾಂಡ್ ದಿನೇಶ್ ಗುಂಡೂರಾವ್ ಪಿಎಲ್ಡಿ ಬ್ಯಾಂಕ್ ಚುನಾವಣೆ ಪ್ರಕ್ರಿಯೆಯೆ ರೆಡ್ ಸಿಗ್ನಲ್ ತೋರಿಸಿದ್ದು, ಯಾರೂ ಸಹ ನಾಮಪತ್ರ ಸಲ್ಲಿಸದಂತೆ ಸೂಚನೆ ನೀಡಿದ್ದಾರೆ.