ದಿನದ ಸುದ್ದಿ
ಇಟ್ಟುಕೊಂಡವನ ಜೊತೆ ಸೇರಿ, ಕಟ್ಟಿಕೊಂಡನಿಗೆ ಚಟ್ಟಕಟ್ಟಿದ ನೀಲಮಣಿ ಅಂಡ್ ಗ್ಯಾಂಗ್
- ಗಿರೀಶ್ ಕುಮಾರ್ ಗೌಡ
ಸುದ್ದಿದಿನ,ಬಳ್ಳಾರಿ: ಅಪ್ಪ, ಮಕ್ಕಳು, ತಾಯಿ, ಮಗ, ಗಂಡ, ಹೆಂಡ್ತಿ ಯಾವ ಸಂಬಂಧಕ್ಕೂ ಬೆಲೆಯೇ ಇಲ್ಲ. ಯಾಕೆಂದರೆ ರಕ್ತ ಸಂಬಂಧಿಕರೇ ರಣ ರಾಕ್ಷಸರಾಗುತ್ತಿದ್ದಾರೆ. ತಾಳಿ ಕಟ್ಟಿದ ಗಂಡನನ್ನೆ ಕೊಂದು ಮಲಗಿಸುವ ಹಂತಕ್ಕೆ ಬಂದಿದ್ದಾರೆ. ಇಂತ ದುರ್ಘಟನೆ ಗಣಿನಾಡು ಬಳ್ಳಾರ ನಗರದಲ್ಲಿ ನಡೆದಿದೆ.
ಜೀವಕ್ಕಿಂತ ಹೆಚ್ಚು ಪ್ರೀತಿಸುವ ಗಂಡನಿದ್ದ ಮುದ್ದಾದ ಮೂರು ಜನ ಮಕ್ಕಳಿದ್ದರು. ಈ ಆಂಟಿಗೆ ಸಣ್ಣ ಸಣ್ಣ ಹುಡುಗರ ಮೇಲೆ ಕಣ್ಣು, ಇತ್ತ ಗಂಡನಿದ್ದರು ತನ್ನ ಶ್ಯಾಮಿಯಾನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದವನಿಗೆ ಸೆರಗು ಹಾಸುತಿದ್ದಳು, ಇದು ಪಾಪದ ಗಂಡನಿಗೆ ಗೊತ್ತಾಗುತ್ತಿದ್ದಂತೆ ಗಂಡನಿಗೆ ಸರಿಯಾದ ಪಾಠ ಕಲಿಸಬೇಕೆಂದು ನಿರ್ಧರಿಸಿ ಬಿಟ್ಲು ಗಂಡ ಈ ಮಿಟುಕುಲಾಡಿಯ ರಂಗೀನಾಟಗಳನ್ನು ಕಣ್ಣು ತುಂಬಾ ನೋಡಿ ಕುಡಿತಕ್ಕೆ ದಾಸನಾದ.
ಅಂಟಿಗೆ ಹುಡುಗರ ಸಹವಾಸ
ಈ ಕಥೆಯ ಸುಪುನಾಥಿಯೇ ಈ ನೀಲವೇಣಿ, ಈಕೆಯ ತವರು ಮನೆ ಬಳ್ಳಾರಿಯ ರಾಣಿತೋಟ. ಗಂಡ ವೆಂಕಟೇಶನದ್ದು ಸಿರುಗುಪ್ಪ ತಾಲೂಕಿನ ಕೊಂಚಗೇರಿ ಗ್ರಾಮ, ಈ ನೀಲವೇಣಿ ಮದುವೆಯಾದ ಬಳಿಕ ವೆಂಕಟೇಶನನ್ನು ಮನೆ ಅಳಿಯನಾಗಿ ಮಾಡಿಕೊಂಡಿದ್ದರು. ವೆಂಕಟೇಶ ಬಳ್ಳಾರಿಯಲ್ಲಿ ಹೂವಿನ ವ್ಯಾಪಾರ ಮಾಡಿಕೊಂಡು ತನ್ನ ಸಂಸಾರದ ನೊಗ ಹೊತ್ತಿದ್ದ, ಹಾಗೋ ಹೀಗೋ ಎರಡು ಗಂಡು ಒಂದು ಹೆಣ್ಣು ಮಕ್ಕಳಿದ್ದಾರೆ.
ಅಂಟಿಗೆ ಆನಂದ ಮೇಲೆ ಪುಲ್ ಲವ್
ಈ ನೀಲವೇಣಿಯ ರಂಗೀನಾಟ ಕಣ್ಣಾರೆ ನೋಡಿ ವೆಂಕಟೇಶ ಕುಡಿತಕ್ಕೆ ದಾಸನಾಗಿ ಹೆಂಡತಿ ನೀಲವೇಣಿಗೆ ಆಗಾಗ ಬೈಯೋದು ಕಿರುಕುಳ ನೀಡೋದು ಮಾಡ್ತಿದ್ದ, ಕುಡಿತಕ್ಕೆ ದಾಸನಾದ ಗಂಡ ಹೂವಿನ ವ್ಯಾಪಾರ ಸರಿಯಾಗಿ ಮಾಡುತ್ತಿರಲ್ಲಿಲ್ಲ. ನೀಲವೇಣಿ ಗಂಡನನ್ನು ದಿನ ನಿನ್ನ ಕಾಟ ನನಗೆ ಸಾಕಾಗಿ ಹೋಗಿದೆ ನೀನು ನಿನ್ನ ತಾಯಿ ಮನೆಯಲ್ಲೆ ಇರುವಂತೆ ಹೇಳಿ ಗಂಡನನ್ನು ಕೊಂಚಗೇರಿಗೆ ಕಳುಹಿಸಿದ್ದಾಳೆ. ಇತ್ತ ನೀಲವೇಣಿ ಹೂವಿನ ವ್ಯಾಪಾರ ಬಿಟ್ಟು ಶ್ಯಾಮಿಯಾನ ಅಂಗಡಿ ಇಟ್ಟುಕೊಂಡಿದ್ದಾಳೆ. ಶ್ಯಾಮಿಯಾನ ಅಂಗಡಿ ಅಂದ ಮೇಲೆ ಕೆಲಸ ಮಾಡುವವರು ಬೇಕಲ್ಲ? ಕೆಲಸಕ್ಕೆಂದು ಆನಂದ್ ಎಂಬ ಯುವಕನನ್ನು ನೇಮಿಸಿಕೊಂಡು ಶ್ಯಾಮಿಯಾನ ಅಂಗಡಿ ನಡೆಸಿಕೊಂಡು ಬಂದಿದ್ದಾಳೆ. ಶ್ಯಾಮಿಯಾನ ಅಂಗಡಿಯಲ್ಲಿ ಕೆಲಸ ಮಾಡುವ ಆನಂದನ ಜೊತೆ ಈ ನೀಲವೇಣಿಗೆ ಸಲುಗೆಯಾಗಿ ಪ್ರೇಮಾಂಕುರವಾಗಿದೆ. ಈ ಆನಂದನ ಜೊತೆ ಈ ಆಂಟಿಗೆ ಫುಲ್ ಲವ್ ಆಗಿದೆ ಇವರಿಬ್ಬರ ಸರಸ ಸಲ್ಲಪಗಳನ್ನ ಪತಿರಾಯ ವೆಂಕಟೇಶ್ ನೋಡಿ ಕುಡಿತಕ್ಕೆ ದಾಸನಾಗಿದ್ದಾನೆ.
ಪ್ಲಾನ್ ಮಾಡಿದ ನೀಲಮಣಿ ಅಂಡ್ ಗ್ಯಾಂಗ್
ಈ ಗಂಡನ ಪ್ರತಿ ದಿನದ ಕಿರುಕುಳ ತಾಳಲಾರದೆ, ಪ್ರಕರಣದ ಆರೋಪಿ 2 ಆನಂದನ ಜೊತೆ ಸೇರಿ ಗಂಡನಿಗೆ ಬುದ್ದಿ ಕಲಿಸಲು ಪ್ಲಾನ್ ಮಾಡಿದ್ದಾಳೆ. ಈ ಆನಂದನಿಗೆ ಹೇಳಿ ಗಂಡ ವೆಂಕಟೇಶನಿಗೆ ರಿಪೇರಿ ಮಾಡಿಸಲು ಹಣ ಕೊಟ್ಟು ಕಳುಹಿಸಿದ್ದಾಳೆ. ಕರ್ಚಿಗೆ ಅಂತ ಪಡೆದ ಹಣದಲ್ಲಿ ಆನಂದ್, ಮಹಮ್ಮದ್ ಗೌಸ್, ಶಿವಶಂಕರ್ ಅಲಿಯಾಸ್ ಚಿರು, ಮಹಮ್ಮದ್ ಸಾಹೀದ್ ಅಲಿಯಾಸ್ ಜಂಗ್ಲಿ, ಷಷಾವಲಿ ಅಲಿಯಾಸ್ ದುದ್ದು, ಮಹಮ್ಮದ್ ಶರೀಫ್, ಮಹಮ್ಮದ್ ಆಸೀಫ್, ಮಹಮ್ಮದ್ ಸೋಹೆಲ್ ಸೇರಿ ಮಧ್ಯೆ ಹಾಗೂ ಗಾಂಜಾ ನಶೆಯಲ್ಲಿ ವೆಂಕಟೇಶನಿಗೆ ಕಟ್ಟಿಗೆ, ಮಚ್ಚು, ಕಲ್ಲಿನಿಂದ ತಲೆಗೆ ಹಣೆ ಎದೆ ಬೆನ್ನು ಹಾಗೂ ಸಿಕ್ಕ ಸಿಕ್ಕಲ್ಲಿ ಹೊಡೆದ ತೀವ್ರ ಗಾಯಗೊಸಿದ ಪರಿಣಾಮ ಸ್ಥಳದಲ್ಲೆ ವೆಂಕಟೇಶ ಪ್ರಾಣ ಬಿಟ್ಟಿದ್ದಾನೆ.
ಹೆಡೆಮುರಿ ಕಟ್ಟಿದ ಬಳ್ಳಾರಿ ಖಾಕಿ
ಏಪ್ರಿಲ್ 04 ಶುಕ್ರವಾರ ದಂದು ಬೆಳಂಬೆಳಿಗ್ಗೆ ನಗರದ ಕಣೇಕಲ್ಲು ಬಸ್ ನಿಲ್ದಾಣ ಬೊಮ್ಮನಹಾಳ್ ರಸ್ತೆಯ ಅಲ್ಟ್ರಾಗೇಟ್ ಬಳಿಯ ಕೆ.ಟಿ.ಪ್ರಜ್ವಲ್ ಕಾಟನ್ ಇಂಡಸ್ಟ್ರಿ ಮುಂದೆ ಕೊಲೆ ಮಾಡಲಾಗಿತ್ತು.ಈ ಕುರಿತು ಬ್ರೂಸ್ ಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೋಲಿಸರು ಕೊಲೆ ನಡೆದ 24 ಗಂಟೆಯಲ್ಲೆ ಎಲ್ಲಾ 9 ಜನ ಆರೋಪಿಗಳನ್ನು ಹೆಡೆಮುರಿ ಕಟ್ಟಿ ಜೈಲಿಗಟ್ಟಿದ್ದಾರೆ.
ಜಿಲ್ಲಾ ಎಸ್ಟಿ ಡಾ.ಶೋಭಾರಾಣಿಯವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ಪಿ ಕೆ.ಪಿ.ರವಿಕುಮಾರ್, ನಗರ ಡಿವೈಎಸ್ಪಿ ನಂದಾರೆಡ್ಡಿ, ಸೈಬರ್ ಠಾಣೆಯ ಡಿವೈಎಸ್ಪಿ ಸಂತೋಷ್ ಚವ್ಹಾಣ್ ನೇತೃತ್ವದಲ್ಲಿ ಬ್ರೂಸ್ ಪೇಟೆ ಪೋಲಿಸ್ ಠಾಣೆಯ ಸಿಪಿಐ ಮಹಾಂತೇಶ್ ರವರ ತಂಡ ಕಾರ್ಯಚರಣೆ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243