ದಿನದ ಸುದ್ದಿ

ಚೀಟಿ ವ್ಯವಹಾರದಲ್ಲಿ ಮೋಸ ; ಅತಿಆಸೆಗೆ ಬಲಿಯಾದ ಗಣಿನಾಡಿನ ಜನ

Published

on

  • ಗಿರೀಶ್ ಕುಮಾರ್ ಗೌಡ, ಬಳ್ಳಾರಿ

ಸುದ್ದಿದಿನ,ಬಳ್ಳಾರಿ:ನಗರದ ಗೋಲ್ಡ್ ಸ್ಮಿತ್ ರಸ್ತೆಯ ಕುಂಬಾರ ಓಣಿ ಬಳಿಯ ವಾಸವಿ ಸ್ವಗೃಹ ಹೋಮ್ ನೀಡ್ ಎಂಬ ಅಂಗಡಿ ತೆರೆದು ಅಲ್ಲಿಗೆ ಬಂದ ಗ್ರಾಹಕರಿಂದ ಚೀಟಿ ರೂಪದಲ್ಲಿ ಹಣ ಪಡೆದು ತಿಂಗಳಿಗೆ ಶೇ.25 ರಷ್ಟು ಲಾಭ ನೀಡುವುದಾಗಿ ವಂಚಿಸುತ್ತಿದ್ದ ವಿಶ್ವನಾಥ ಎಂಬ ವ್ಯಕ್ತಿಯನ್ನು ಬ್ರೂಸ್ ಪೇಟೆ ಪೊಲೀಸರು ಬಂಧಿಸಿದ್ದರು.

ಚೀಟಿ ವ್ಯವಹಾರ ಮಾಡಿ‌ ಮೋಸ

ಗ್ರಾಹಕರಿಗೆ ತಾವು ಕೊಡುವ ಹಣಕ್ಕೆ ಲಾಭಾಂಶವನ್ನು ಕೊಡುವುದಾಗಿ ನಂಬಿಸಿ ಗ್ರಾಹಕರಿಂದ ಹಣವನ್ನು ಪಡೆದು ಯಾವುದೇ ಲಾಭಾಂಶವನ್ನು ಕೊಡದೇ ಚೀಟಿ ವ್ಯವಹಾರ ಮಾಡಿ ಮೋಸ ಮಾಡುತ್ತಿದ್ದರು ಎಂದು ವಾಸವಿ ಸ್ವಗೃಹ ಹೋಮ್ ನೀಡ್ ಅಂಗಡಿಯ ಮಾಲಿಕ ಟಿ.ವಿಶ್ವನಾಥ(58)ರ ಮೇಲೆ ದೂರು ಬಂದ ಹಿನ್ನೆಲೆಯಲ್ಲಿ ಈತನನ್ನು ಪೊಲೀಸರು ಬಂಧಿಸಿ 19,38,500 ರೂ. ಮತ್ತು ಗ್ರಾಹಕರು ಆಪಾದಿತನಿಗೆ ಹಣ ಕಟ್ಟುತ್ತಿದ್ದ ಬಗ್ಗೆ ಇದ್ದ ಚೀಟಿಗಳು ಹಾಗು ವ್ಯವಹಾರಕ್ಕೆ ಬಳಸುತ್ತಿದ್ದ ಸಲಕರಣೆ ವಶಪಡಿಸಿಕೊಂಡಿದ್ದರು.

ಗ್ಯಾನಪ್ಪ ನೀಟಿದ ದೂರಿನಿಂದ ಪೊಲೀಸರು ಎಂಟ್ರಿ

ಸಹಕಾರ ಸಂಘಗಳ ಸಹಾಯಕ ನಿಬಂಧಕ ಗ್ಯಾನಪ್ಪ ನೀಡಿದ ದೂರಿನನ್ವಯ ಕಳೆದ ಆರು ತಿಂಗಳಿಂದಲೂ ಸರ್ಕಾರದಿಂದ ಅಥವಾ ಮಂಜೂರು ಮಾಡುವ ಯಾವುದೇ ಪ್ರಾಧಿಕಾರದಿಂದ ಪೂರ್ವ ಮಂಜುರಾತಿ ಪಡೆಯದೇ ಗ್ರಾಹಕರಿಗೆ ಮೋಸ ಮಾಡುವ ದುರುದ್ದೇಶದಿಂದ, ಗ್ರಾಹಕರಿಂದ ಅನಧಿಕೃತವಾಗಿ ಚೀಟಿಯ ರೂಪದಲ್ಲಿ ನಗದು ಹಣವನ್ನು ಕಟ್ಟಿಸಿಕೊಂಡು ಹಣಕ್ಕೆ 25% ಹಣವನ್ನು ಬೋನಸ್ ರೂಪದಲ್ಲಿ ಕೊಡುವುದಾಗಿ ನಂಬಿಸಿ ಗ್ರಾಹಕರಿಗೆ ಯಾವುದೇ ಲಾಭಾಂಶವನ್ನು ಕೊಡದೇ ಚೀಟಿ ವ್ಯವಹಾರ ಮಾಡುತ್ತಿದ್ದ ವಿಶ್ವನಾಥ ವಿರುದ್ಧ ಆರೋಪ ಕೇಳಿಬಂತು.ಆಗ ಪೊಲೀಸರು ಎಂಟ್ರಿ ಆಗಿದ್ದಾರೆ‌.ಗಣಿನಾಡು ಬಳ್ಖಾರಿ ನಗರದಲ ಇಂತ ವ್ಯವಹಾರಗಳು ಬಹಳ ನಡೆಯುತ್ತೇವೆ ನಿಧಾನಗತಿಯಲ್ಲಿ ಮೋಸ ಹೋದ ಮೇಲೆ ಬೆಳಕಿಗೆ ಬರುತ್ತವೆ.

ಮೋಸಕ್ಕೆ ಬಲಿಯಾಗುವ ಜನರು

ಗಣಿನಾಡು ಬಳ್ಳಾರಿ ನಗರದಲ್ಲಿ ಜನರು ಆಸೆ,ಅತಿಆಸೆಯಿಂದ ಬೇಗ ಹಣವನ್ನು ಸಂಪಾದನೆ ಮಾಡಬಹುದು ಎಂದು ಈ ಮಾರ್ಗಗಳನ್ನು ಅನುಸರಿಸ ಮೋಸ ಹೋಗುತ್ತಾರೆ. ಟಿ.ವಿಶ್ವನಾಥ ಗ್ರಾಹಕರೊಂದಿಗೆ ನಿಶ್ಚಿತ ಅವದಿಗೆ ನಿಯತಕಾಲಿಕ ಕಂತುಗಳ ರೂಪದಲ್ಲಿ ಹಣದ ನಿಶ್ಚಿತ ಹಣವನ್ನು ಕೊಡಲು ಒಪ್ಪಿ ಚೀಟಿ ಒಪ್ಪಂದ ಮಾಡಿಕೊಂಡು ಗ್ರಾಹಕರಿಗೆ ಯಾವುದೇ ಲಾಭಾಂಶವನ್ನು ಕೊಡದೇ ಚೀಟಿ ವ್ಯವಹಾರ ಮಾಡಿ ಮೋಸ ಮಾಡುತ್ತಿರುವುದು ಕಂಡು ಬಂದಿದ್ದರಿಂದ ಆತನನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿತ್ತು.ಆದರೆ ಸಾರ್ವಜನಿಕರಿಂದ ನೊಂದವರಿಂದ ದೂರ ಬಾರದ ಹಿನ್ನೆಲೆಯಲ್ಲಿ ಆತನಿಗೆ ವಿಚಾರಣೆ ಮಾಡಿ ಠಾಣಾ ಬೇಲ್ ನೀಡಿ ನೋಟಿಸ್ ಕೊಟ್ಟು ಕಳುಹಿಸಲಾಗಿತ್ತು.

ಪೊಲೀಸರ ಪಾತ್ರ ಏನು ?

ಈ‌ ಹಿಂದೆ ಗಣಿನಾಡು ಬಳ್ಳಾರ ನಗರದ ವಿವಿಧ ಠಾಣೆಗೆ ಸಂಬಂಧಿಸಿದಂತೆ ಹಣಕಾಸಿನ ವಿಚಾರವಾಗಿ ಮೋಸ ಮಾಡಿದ ಘಟನೆಗಳು ನಡೆದಿದೆ. ಆದರೆ ಮೋಸ ಮಾಡಿದ ವ್ಯಕ್ತಿಗಳಿಂದ ಮೋಸಕ್ಕೆ ಒಳಗಾದ ಜನರಿಗೆ ಹಣವನ್ನು ಕೊಡಿಸಿಲ್ಲ ಎನ್ನುವ ಆರೋಪ ಸಹ ಇದೆ. ಇಲ್ಲಿ ಪೊಲೀಸ್ ಇಲಾಖೆಯ ಪಾತ್ರ ಏನು ? ಎನ್ನುವ ಅಂಶ ಸಾರ್ವಜನಿಕರಲ್ಲಿ ಚರ್ಚೆ ಆಗುತ್ತಿದೆ.
ಬಳಿಕ ವಿಶ್ವನಾಥ ಗ್ರಾಹಕರಿಗೆ ಮೊನ್ನೆ ನಿಮ್ಮ ಹಣ ವಾಪಾಸ್ ಕೊಡುವೆ ಅಂಗಡಿ ಬಳಿ ಬನ್ನಿ ಎಂದಿದ್ದರು. ಆದರೆ ನಿನ್ನೆ ವಿಶ್ವನಾಥ ಅಂಗಡಿ ಬಳಿ ತೆರಳಿದ ನೂರಾರು ಗ್ರಾಹಕರಿಗೆ ಬಿಗ್ ಶಾಕ್ ಕಾದಿತ್ತು. ವಿಶ್ವನಾಥ ಎಸ್ಕೇಪ್ ಆಗಿದ್ದ ಇದನ್ನ ಕಂಡ ಗ್ರಾಹಕರು ಕಣ್ಣೀರಾಕಿ ಬ್ರೂಸ್ ಪೇಟೆ ಪೋಲಿಸ್ ಠಾಣೆ ಬಳಿ ಜಮಾಯಿಸಿದ್ದಾರೆ. ಪೋಲಿಸ ಮುಂದೆ ತಾವು ಕಟ್ಟಿದ ಹಣದ ಬಗ್ಗೆ ವಿವರಿಸಿ ಠಾಣೆಯಲ್ಲಿ ಒಬ್ಬರಾಗಿ ಬರೆಸುತ್ತ ನಿಂತಿದ್ದಾರೆ.

ಶಾಸಕ ಭರತ್ ರೆಡ್ಡಿ ಭರವಸೆ

ಎಲ್ಲರೂ ಕಟ್ಟಿದ ಹಣ ಎರಡು ಕೋಟಿ ದಾಟುವ ಸಂಭವವಿದೆ ಎನ್ನಲಾಗುತ್ತಿದೆ. ನೊಂದ ಜನ ಠಾಣೆಯಿಂದ ನಿನ್ನೆ ಮದ್ಯಾಹ್ನ ಶಾಸಕ ನಾರಾ ಭರತ್ ರೆಡ್ಡಿ ಕಛೇರಿಗೆ ತೆರಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಜನರು ಕಣ್ಣೀರು ನೋಡದ ಶಾಸಕರು ನಾನೇ ಠಾಣೆಗೆ ಬರುವೆ ಎಂದು ಹೇಳಿ ಮಂಗಳವಾರ ಸಂಜೆ ಶಾಸಕ ನಾರಾ ಭರತ್ ರೆಡ್ಡಿ ಬ್ರೂಸ್ ಪೇಟೆ ಠಾಣೆಗೆ ಭೇಟಿ ನೀಡಿ ನ್ಯಾಯ ಕೊಡಿಸಿ ಆರೋಪಿಯನ್ನು ಕೊಡಲೇ ಬಂಧಿಸಿ ಎಂದು ಇನ್ಸ್ ಪೆಕ್ಟರ್ ಮಹಾಂತೇಶ್ ಗೆ ಸೂಚಿಸಿ ಜನರಿಗೆ ಸಾಂತ್ವನ ಹೇಳಿ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ.

ಜನರು ಬುದ್ಧಿವಂತರಾಗಿ

ಮನೆಯಲ್ಲಿ ಹಣ ಇದೆ ಎಂದು ಆಸೆ,ಅತಿಆಸೆಗೆ ಒಳಗಾಗದೇ ಗೊತ್ತಿಲ್ಲದ ಇರುವ ವ್ಯಕ್ತಿಗಳಿಗೆ ಕೊಟ್ಟಿ ಮೋಸ ಹೋಗಬಾರದು ಎನ್ನುವುದು ನಮ್ಮ ಆಸೆಯವಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version