ದಿನದ ಸುದ್ದಿ
ಬಳ್ಳಾರಿ | ಕೋವಿಡ್-19: 238 ಜನರ ವರದಿ ನೆಗೆಟಿವ್ ಹಿನ್ನೆಲೆ ಡಿಸ್ಚಾರ್ಜ್
ಸುದ್ದಿದಿನ,ಬಳ್ಳಾರಿ : ಜಿಲ್ಲೆಯಲ್ಲಿ ಕೋವಿಡ್-19ಗೆ ಸಂಬಂಧಿಸಿದಂತೆ ಈ ಹಿಂದೆ 13 ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು, ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 238 ಜನ Primary Contact ಪತ್ತೆಹಚ್ಚಲಾಗಿದ್ದು, ಈ ಪೈಕಿ 238 ಜನರನ್ನು ಪರೀಕ್ಷೆ ಮಾಡಲಾಗಿ ಎಲ್ಲಾ ಟೆಸ್ಟ್‌ಗಳು ನೆಗೆಟಿವ್ ಎಂದು ವರದಿ ಬಂದ ಹಿನ್ನಲೆಯಲ್ಲಿ 238 ಜನರನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು ಹೋಮ್ ಕ್ವಾರಂಟೈನ್ ನಲ್ಲಿರುವಂತೆ ಹಾಗೂ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ
ನಿಜಾಮುದ್ದೀನ್‌ನಲ್ಲಿದ್ದ 80 ಜನರಲ್ಲಿ ಈ ಹಿಂದೆ 01 ಪಾಸಿಟಿವ್ ಪ್ರಕರಣ ಹೊರತುಪಡಿಸಿ, ಇನ್ನುಳಿದ 79 ಜನರ ಟೆಸ್ಟ್‌ಗಳು ನೆಗೆಟಿವ್ ಎಂದು ವರದಿ ಬಂದ ಹಿನ್ನಲೆಯಲ್ಲಿ ಹೋಮ್ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಿ ಬಿಡುಗಡೆ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಕೋವಿಡ್-19 ಪಾಸಿಟಿವ್ ಪ್ರಕರಣಗಳು
ವರದಿಯಾದ Containment ಪ್ರದೇಶಗಳಲ್ಲಿ ನಿರಂತರವಾಗಿ ILI ಪ್ರಕರಣಗಳಿಗಾಗಿ ಸಮೀಕ್ಷೆ
ನಡೆಸಲಾಗುತ್ತಿದ್ದು, ಪರಿಶೀಲಿಸಿ ಪರೀಕ್ಷಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243