ದಿನದ ಸುದ್ದಿ
ಬಳ್ಳಾರಿ | ಮಹಿಳೆ ಮತ್ತು ಮಗು ನಾಪತ್ತೆ
ಸುದ್ದಿದಿನ,ಬಳ್ಳಾರಿ : ನಗರದ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 25 ವರ್ಷದ ಕೆ.ವಿ.ಹರಣಿ ಎನ್ನುವ ಮಹಿಳೆ ಮತ್ತು 4 ವರ್ಷದ ಚಿರಸ್ವಿ ಎನ್ನುವ ಮಗು ಫೆ.19ರಿಂದ ಕಾಣೆಯಾಗಿರುವ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ತನಿಖಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಣೆಯಾದ ಮಹಿಳೆಯ ಚಹರೆ ಗುರುತು
5.4ಅಡಿ ಎತ್ತರ,ಬಿಳಿ ಮೈಬಣ್ಣ,ದುಂಡು ಮುಖ,ಕಾಫಿ ಬಣ್ಣದ ಚೂಡಿದಾರ್ ಧರಿಸಿರುತ್ತಾಳೆ,ತೆಲುಗು ಮತ್ತು ಇಂಗ್ಲೀಷ್ ಮಾತನಾಡುತ್ತಾಳೆ.
ಕಾಣೆಯಾದ ಮಗುವಿನ ಚಹರೆ ಗುರುತು
2.5ಅಡಿ ಎತ್ತರ,ಬಿಳೀ ಮೈಬಣ್ಣ,ದುಂಡು ಮುಖ,ಹಸಿರು ಮತ್ತು ನೀಲಿ ಬಣ್ಣದ ಫ್ರಾಕ್, ತೆಲುಗು ಮಾತನಾಡುತ್ತಾಳೆ.
ಕಾಣೆಯಾದವರ ಬಗ್ಗೆ ಯಾವುದಾದರೂ ಮಾಹಿತಿ ದೊರೆತಲ್ಲಿ ಕೂಡಲೆ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ | ರಾಣೇಬೆನ್ನೂರು ನಗರದ ತಂದೆ-ಮಗ ಕಾಣೆ : ಪತ್ತೆಗೆ ಮನವಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243