ಲೈಫ್ ಸ್ಟೈಲ್

ಕೊಬ್ಬು ಕರಗಿಸೋ ‘ಬೆಟ್ಟದ ನೆಲ್ಲಿಕಾಯಿ’ ಬಗ್ಗೆ ನಿಮಗೆಷ್ಟು ಗೊತ್ತು..?

Published

on

ಸುದ್ದಿದಿನ ಡೆಸ್ಕ್ : ಬೆಟ್ಟದ ನೆಲ್ಲಿಕಾಯಿ ಎಂದರೆ ಎಲ್ಲರಿಗೂ ಬಾಯಲ್ಲಿ ನೀರು ಬರುತ್ತದೆ. ಆಯುರ್ವೇದದಲ್ಲಿ ಅದು ಇರಲೇ ಬೇಕು. ಅದರಲ್ಲಿ ಇರೋ ವಿಟಮಿನ್-ಸಿ, ಕಬ್ಬಿಣ, ಹೆಚ್ಚಿನ ನಾರಿನಾಂಶ ಮತ್ತು ಕ್ಯಾಲ್ಸಿಯಂ ಅದನ್ನು ಎಲ್ಲಾ ಔಷಧಗಳಲ್ಲಿ ಬಳಸುವಂತೆ ಮಾಡಿದೆ. ಇದನ್ನು ಹೇಗೆಲ್ಲ ಉಪಯೋಗ ಮಾಡಬಹುದು ತಿಳಿಯೋಣ ಮುಂದೆ.

ಉಪಯೋಗಗಳು

  1. ಮೂರು ಚಮಚ ನೆಲ್ಲಿಕಾಯಿ ರಸರೊಂದಿಗೆ ಮೂರು ಚಮಚ ಜೇನುತುಪ್ಪವನ್ನು ಬೆರೆಸಿ ಸೇವಿಸಿದರೆ ಮೆದುಳಿನ ಖಾಯಿಲೆಯು ನಿವಾರಣೆಯಾಗುತ್ತದೆ.
  2. ಬೆಲ್ಲದೊಂದಿಗೆ ನೆಲ್ಲಿಕಾಯಿ ರಸವನ್ನು ಕುಡಿಯುವುದರಿಂದ ಹೊಟ್ಟೆ ನೋವು ನಿವಾರಣೆಯಾಗುತ್ತದೆ.
  3. ನೆಲ್ಲಿಕಾಯಿಯ ಎಲೆಗಳಿಂದ ಕಷಾಯ ತಯಾರಿಸಿ ಬಾಯಿ ಮುಕ್ಕಳಿಸಿದರೆ ಬಾಯಿ ಹುಣ್ಣು ಮಾಯವಾಗುತ್ತದೆ.
  4. ಕಿರುನಲ್ಲಿಕಾಯಿಯನ್ನು ಉಪ್ಪಸಹಿತ ತಿಂದರೆ ತಲೆಸುತ್ತುವಿಕೆ, ಅಜೀರ್ಣ ನಿವಾರಣೆಯಾಗುತ್ತದೆ.
  5. ಬೆಟ್ಟದ ನೆಲ್ಲಿಕಾಯಿಯ ರಸವನ್ನು ಅಂಗೈಗೆ ಹಚ್ಚಿಕೊಂಡರೆ ಅತಿ ಬೆವರು ವಸರುವುದು ಸ್ಥಗಿತಗೊಳ್ಳುವುದು.
  6. ಬೆಟ್ಟದ ನೆಲ್ಲಿಕಾಯಿಯ ಚೂರ್ಣವನ್ನು ಮಜ್ಜಿಗೆಯಲ್ಲಿ ಕದಡಿ ಕುಡಿದರೆ ಆಸನಾಗ್ರದಲ್ಲಿ ಆಗುವ ಉರಿ ನಿಂತುಹೋಗುವುದು.
  7. ಬಲಿತ ನೆಲ್ಲಿಕಾಯಿಯ ಚೂರ್ಣವನ್ನು ಬಿಸಿನೀರಿನಲ್ಲಿ ಚೆನ್ನಾಗಿ ಕಿವುಚಿ ಅದಕ್ಕೆ ಸಕ್ಕರೆಯನ್ನು ಸೇರಿಸಿ ಶೋಧಿಸಿದ ನಂತರ ಸೇವಿಸಿದರೆ ಬಾಯಿ, ಮೂಗು ಮತ್ತು ಗುದದ್ವಾರದಿಂದ ಹೊರ ಬೀಳುವ ರಕ್ತ ಗಟ್ಟಿ ನಿಂತುಹೋಗುವುದು.
  8. ಒಂದು ಊಟದ ಚಮಚ ನೆಲ್ಲಿಕಾಯಿ ರಸವನ್ನು ಅಷ್ಟೇ ಪ್ರಮಾಣದ ಜೇನುತುಪ್ಪವನ್ನು ಪ್ರತಿದಿನ ಬೆಳಗಿನ ಸಮಯದಲ್ಲಿ ಸೇವಿಸುವುದರಿಂದ ರೋಗವೂ ಸಹ ಸಂಪೂರ್ಣವಾಗಿ ಗುಣವಾಗುತ್ತದೆ
  9. ನಿರಂತರವಾಗಿ ನೆಲ್ಲಿಕಾಯಿಯ ರಸವನ್ನು ಸೇವಿಸಿದರೆ ಕಣ್ಣಿನ ದೋಷಗಳು ದೂರವಾಗುವುದು.
  10. ಅಧಿಕ ರಕ್ತ ಸ್ರಾವವಗಿರುವವರು ನೆಲ್ಲಿಕಾಯಿಯ ರಸವನ್ನು ಜೇನುತುಪ್ಪವನ್ನು ಬೆರೆಸಿ ಕುಡಿದರೆ ಹೆಚ್ಚು ಚೈತನ್ಯ ಉಂಟಾಗುತ್ತದೆ.
  11. ನುಣ್ಣಗೆ ಅರೆದ ನೆಲ್ಲಿಕಾಯಿಯೊಡನೆ ಬೆಲ್ಲ ಸೇರಿಸಿ ತಿಂದರೆ ಸಿಹಿಮೂತ್ರ ರೋಗಿಗಳ ರೋಗ ಸ್ವಲ್ಪ ಮಟ್ಟಿಗೆ ಹತೋಟಿಗೆ ಬರುತ್ತದೆ.
  12. ಮಧುಮೇಹ ರೋಗಿಗಳು, ಕೂದಲು ಉದುರುವವರು ನೆಲ್ಲಿಕಾಯಿಯನ್ನು ಹೆಚ್ಚು ಉಪಯೋಗಿಸಿದರೆ ದೋಷಗಳು ನಿವಾರಣೆಯಾಗುತ್ತದೆ.
  13. ನೆಲ್ಲಿಕಾಯಿಯನ್ನು ತೈಲದೊಡನೆ ಬೆರೆಸಿ ತಲೆಗೆ ಹಚ್ಚಿಕೊಂಡರೆ ಕೂದಲು ನೆರೆಯುವುದಿಲ್ಲ. ಕೇಶದ ಬೆಳವಣಿಗೆಗೆ ಹೆಚ್ಚು ಸಹಾಯಕವಾಗುತ್ತದೆ.
  14. ನೆಲ್ಲಿಕಾಯಿಯ ಮೊರಬ್ಬ, ಚಟ್ನಿ ಮಾಡಿಕೊಂಡು ಕ್ರಮವಾಗಿ ತಿನ್ನುವುದರಿಂದ ನೆಗಡಿ, ಉಬ್ಬಸ , ಕ್ಷಯ, ಅಕಾಲ ಮುಪ್ಪು ಮುಂತಾದ ರೋಗಗಳಿಂದ ಗುಣವಾಗುತ್ತದೆ.
  15. ನೆಲ್ಲಿಕಾಯಿಯನ್ನು ಹೆಚ್ಚು ಬಳಸುವುದರಿಂದ ಕೊಲೆಸ್ಟ್ರಾಲ್ ಕಮ್ಮಿ ಮಾಡಿ ಗಾಲ್ ಬ್ಲಾಡರ್ ನಲ್ಲಿ ಕಲ್ಲು ಕರಗಿಸುತ್ತದೆ.
  16. ಊಟದ ನಂತರ ನೆಲ್ಲಿಕಾಯಿ ಚೂರ್ಣ ತಿನ್ನುವುದರಿಂದ ಅಲ್ಸರ್ ಕಡಿಮೆ ಆಗುವುದು.
  17. ನೆಲ್ಲಿಕಾಯಿಯಲ್ಲಿ ಆಂಟಿಆಕ್ಸಿಡೆಂಟ್ ಮತ್ತು ವಿಟಮಿನ್‌ ಗಳು ಇರುವ ಕಾರಣ ಅದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
  18. ನೆಲ್ಲಿಕಾಯಿಯ ರಸ ಅಥವಾ ನೆಲ್ಲಿಕಾಯಿಯ ಪುಡಿಯನ್ನು ಸ್ವಲ್ಪ ಬಿಸಿ ನೀರಿನಲ್ಲಿ ಬೆರೆಸಿ ಸೇವಿಸುವುದರಿಂದ ಬ್ಲಡ್ ಶುಗರ್ ಕಡಿಮೆ ಮಾಡುತ್ತದೆ.
  19. ಮೂತ್ರ ಮತ್ತು ಮೂತ್ರಪಿಂಡ ಸಂಬಂಧಿಸಿದ ರೋಗಗಳನ್ನು ಈ ನೆಲ್ಲಿಕಾಯಿ ಸೇವನೆಯಿಂದ ಮೂತ್ರದ ಮೂಲಕ ದೇಹದಲ್ಲಿನ ಹೆಚ್ಚಿನ ಉಪ್ಪಿನಾಂಶ ಮತ್ತು ಅವಶ್ಯಕವಾದ ಟಾಕ್ಸಿನ್, ಯೂರಿಕ್ ಆಸಿಡ್ ಅನ್ನು ಹೊರಹಾಕುತ್ತದೆ.
  20. ನೆಲ್ಲಿಕಾಯಿಯ ಸೇವನೆಯಿಂದ ಹೃದಯದಲ್ಲಿ ಆಗೋ ಹೋಲ್ ಮತ್ತು ಹೃದಯ ಸಂಬಂಧಿಸಿದ ಕಾಯಿಲೆಯನ್ನು ಕಡಿಮೆ ಮಾಡುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version