ಲೈಫ್ ಸ್ಟೈಲ್
ಬಿಳಿಕೂದಲು, ಖಿನ್ನತೆಯನ್ನು ವಾಸಿಮಾಡಲು ರಾಮಬಾಣ ವಿಟಮಿನ್ ಬಿ5
1933ರಲ್ಲಿ ರೋಜರ್ ವಿಲಿಯಮ್ಸ್ ಎಂಬ ವಿಜ್ಞಾನಿಯಿಂದ ಕಂಡುಹಿಡಿಯಲ್ಪಟ್ಟ ವಿಟಮಿನ್ ಬಿ5 ಜೈವಿಕ ವಸ್ತುಗಳ ಅಂಗಾಂಶಗಳ ಸತ್ವ ಈಸ್ಟ್‍ನ ವೃದ್ಧುಗಾಗಿ ಬಳಸಲ್ಪಟ್ಟಿತು.ಈ ಅಂಶಕ್ಕೆಪ್ಯಾಂಟೋಥಿನಿಕ್ ಆಸಿಡ್ ಎಂದು ಹೆಸರಿಡಲಾಯಿತು. ಪ್ಯಾಂಟೋಸ್ ಎಂದರೆ ಗ್ರೀಕ್‍ನಲ್ಲಿ ‘ಎಲ್ಲಡೆ’ ಎಂದರ್ಥ. 1939ರಲ್ಲಿ ವಿಲಿಯಮ್ಸ್ ಇದನ್ನು ತಯಾರಿಸಿದನು.
ಇದು ತಿಳಿಹಳದಿ ಬಣ್ಣದ ಮದವಾದ ದ್ರವರೂಪದಲ್ಲಿ ಕಂಡು ಬರುತ್ತದೆ. ಇದು ಮಂದವಾದ ದ್ರವರೂಪದಲ್ಲಿ ಬಳಸಲ್ಪಡುತ್ತದೆ. ಸಂಸ್ಕರಿತ ಆಹಾರಗಳು, ಕೆಫೀನ್, ನಿದ್ರೆ ಮಾತ್ರೆಗಳು ಮತ್ತು ಆಲ್ಕೋಹಾಲ್‍ಗಳಲ್ಲಿ ನಾಶ ಹೊಂದುತ್ತವೆ. ಇದು ಜೀರ್ಣಾಂಗಗಳಿಂದ ಹೀರಲ್ಪಟ್ಟು ಮೂತ್ರ ಮತ್ತು ಎದೆಹಾಲಿನೊಂದಿಗೆಹೊರಬರುತ್ತದೆ.
ಪ್ರಯೋಜನ
ಪ್ಯಾಂಟೋಥಿನಿಕ್ ಆಸಿಡ್‍ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಕಾದಲ್ಲಿ ಕೂದಲುಗಳು ಬಿಳಿಯಾಗುವುದು, ಸುಸ್ತು, ಖಿನ್ನತೆ, ತಲೆಸುತ್ತುಗಳಂಥ ಚಿಹ್ನೆಗಳು ಇದರ ಕೊರತೆಯಿದ ಉಂಟಾಗುತ್ತವೆ. ಅಷ್ಟೇ ಅಲ್ಲ, ಚರ್ಮವ್ಯಾಧಿಗಳು, ಕೀಲುನೋವುಗಳು, ಸ್ನಾಯು ಸೆಳೆತ, ನಿದ್ರಹೀಣತೆಗಳೂ ಬಿಟ್ಟೂ ಬಿಡದಂತೆ ಕಾಡುತ್ತವೆ.ಸ್ನಾಯು ಸೆಳೆತ, ನಿದ್ರಾಹೀನತೆಗಳೂ ಬಿಟ್ಟೂ ಬಿಡದಂತೆ ಕಾಡುತ್ತವೆ.
ಮುಖ್ಯವಾಗಿ ಮಾನಸಿಕ ರೋಗಗಳನ್ನು ನಿಯಂತ್ರಿಸುವಲ್ಲಿ ಪ್ಯಾಟೋಥಿನಿಕ್ ಪ್ರಮುಖ ಪಾತ್ರ ವಹಿಸುತ್ತದೆ. 6ವಾಗಳ ಕಾಲ ಮಾನಸಿಕ ಒತ್ತಡಕ್ಕೆ ಒಳಗಾದವರನ್ನು ಶೀತಲ ನೀರಿನಲ್ಲಿ ಮುಳುಗಲು ಹೇಳಿ ಮೊದಲು ಮತ್ತು ನಂರ ನೀರಿನಲ್ಲಿ ಮುಳುಗಲು ಹೇಳಿ ಮೊದಲು ಮತ್ತು ನಂತರ 10,000 ಮಿಲಿಗ್ರಾಂ ಕ್ಯಾಲ್ಷಿಯಂ ಪ್ಯಾಟೋಥಿನೇಟ್ ಕೊಟ್ಟು ಪರೀಕ್ಷಿಸಲಾಯಿತು. ಅವರ ರಕ್ತದ ಒತ್ತಡ, ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಿಸಲ್ಪಟ್ಟಿತ್ತು. ಕೆಟ್ಟ ಕೊಲೆಸ್ಟ್ರಾಲ್ ಕೂಡಾ ಕಡಿಮೆಯಾಗಿತ್ತು.
ಸಾಮಾನ್ಯವಾಗಿ ಕೀಲುನೋವುಗಳು ಕಾಣೀಸಿಕೊಳ್ಳುವುದಕ್ಕೆ ವಯಸ್ಸಿನ ಅಧಿಕ್ಯದೊಂದಿಗೆ ಪೋಷಕಾಂಶಗಳ ಕೊರತೆಯೂ ಕಾರಣವಾಗುತ್ತದೆ. ನೈಸರ್ಗಿಕವಾಗಿ ಪ್ಯಾಟೋಥಿನಿಕ್ ಆಸಿಡ್ ಇರುವ ಆಹಾರಗಳನ್ನು ತೆಗೆದುಕೊಳ್ಳುವುದರಿಂಧ ಸ್ನಾಯು ಸೆಳೆತ, ಕೀಲುನೋವುಗಳು ಕಮ್ಮಿಯಾಗುವ ಸಾಧ್ಯತೆಗಳಿವೆ ಎಂದು ಸಂಶೋಧಕರು ಹೇಳುತ್ತಾರೆ.
ದಿನಕ್ಕೆ 1,000 ಮಿಲಿಗ್ರಾಂನಷ್ಟು ಪ್ಯಾಂಟೋಥೆನಿಕ್ ಸೇವನೆಯಿಂದ ಅನೇಕರಲ್ಲಿ ಕೀಲುನೋವು ಕಡಿಮೆಯಾಗಿದೆ ಎಂದು ಪ್ರಯೋಗಗಳು ಹೇಳುತ್ತವೆ.
ಚರ್ಮ ಅಕಾಲದಲ್ಲಿ ನಿರಿಗೆಗಟ್ಟುವುದು, ಬಿಸಿಲಿನಿಂದ ಕಪ್ಪಗುವುದು, ಚರ್ಮದ ಉರಿ, ತುರಿಕೆಗಳಿಗೆ ಪ್ಯಾಟೋಥೆನಿಕ್ ಹಚ್ಚುವ ಮುಲಾಮಿನ ರೂಪದಲ್ಲಿ ಕೊಡಲಾಗುತ್ತದೆ.ಆಹಾರಂಶ ಮೂಲಕವೇ ಪಡೆಯುವುದು ಉತ್ತಮ.
ಬಿ5 ದೊರೆಯುವ ಆಹಾರಗಳು
- ಅಣಬೆ – 2200 ಮೈಕ್ರೋಗ್ರಾಂ
- ಬಟಾಣಿ – 2000 ಮೈಕ್ರೋಗ್ರಾಂ
- ಲಿವರ್ – 8000 ಮೈಕ್ರೋಗ್ರಾಂ
- ಶೇಂಗಾಬೀಜ – 2800 ಮೈಕ್ರೋಗ್ರಾಂ
- ಓಟ್ಸ್ – 1500 ಮೈಕ್ರೋಗ್ರಾಂ
- ಸೋಯಾಬೀನ್ – 1700 ಮೈಕ್ರೋಗ್ರಾಂ
- ಪಾಲಿಶ್‍ಮಾಡದ ಕೆಂಪಕ್ಕಿ – 1100 ಮೈಕ್ರೋಗ್ರಾಂ
- ಸೂರ್ಯಕಾಂತಿ ಬೀಜ – 1400 ಮೈಕ್ರೋಗ್ರಾಂ
- ಗೋಡಂಬಿ – 1300 ಮೈಕ್ರೋಗ್ರಾಂ
- ಹೂಕೋಸು – 1000 ಮೈಕ್ರೋಗ್ರಾಂ
- ಮೊಳಕೆ ಕಟ್ಟಿದ ಗೋಧಿ – 1200 ಮೈಕ್ರೋಗ್ರಾಂ