ದಿನದ ಸುದ್ದಿ
ಬೆಸ್ಕಾಂ ಮಾಪಕ ಓದುವವರಿಗೆ ಪಡಿತರ ಕಾರ್ಡ್ ಸಂಖ್ಯೆ ನೀಡಿ ಸಹಕರಿಸಿ
ಸುದ್ದಿದಿನ,ದಾವಣಗೆರೆ : ಘನ ಕರ್ನಾಟಕ ಸರ್ಕಾರವು ನಾಗರೀಕ ಸೌಲಭ್ಯಗಳ ನಿರ್ವಹಣೆಯ ವ್ಯವಸ್ಥೆಯನ್ನು ಉತ್ತಮಗೊಳಿಸಲು ಕುಟುಂಬ ಪಡಿತರ ಕಾರ್ಡ್ ಸಂಖ್ಯೆಯನ್ನು ಬೆ.ವಿ.ಕಂ ನ ಅಂಕಿ ಅಂಶಗಳಲ್ಲಿ ನಮೂದಿಸಲು ನಿರ್ದೇಶನವನ್ನು ನೀಡಿದ್ದು, ಈ ಮಾಹಿತಿಯನ್ನು ಮಾಪಕ ಓದುಗರ ಮೂಲಕ ಸಂಗ್ರಹಿಸಿ ದಾಖಲಿಸಲು ಸೂಚಿಸಿದೆ.
ಆದ್ದರಿಂದ ನಗರ ಉಪವಿಭಾಗ-1, ಬೆ.ವಿ.ಕಂ ದಾವಣಗೆರೆ ವ್ಯಾಪ್ತಿಯ ಗ್ರಾಹಕರು ತಮ್ಮ ಆವರಣದಲ್ಲಿರುವ ಮಾಪಕಗಳ ಓದಲು ಬರುವ ಬೆ.ವಿ.ಕಂ ನ ಮಾಪಕ ಓದುಗರಿಗೆ ಕುಟುಂಬ ಪಡಿತರ ಕಾರ್ಡ್‍ನ ಸಂಖ್ಯೆಯನ್ನು ಮಾಪಕ ಓದುವ ಯಂತ್ರದಲ್ಲಿ ನಮೂದಿಸಲು ಸಹಕರಿಸಿ, ಸರ್ಕಾರದ ಯೋಜನೆಯನ್ನು ಯಶಸ್ವಿಗೊಳಿಸಬೇಕೆಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243