ದಿನದ ಸುದ್ದಿ

ಮಹಾಮಳೆಗೆ ಉಕ್ಕಿ ಹರಿಯುತ್ತಿರುವ ನದಿಗಳು; ತುಂಗಭದ್ರಾ ಡ್ಯಾಂ ತುಂಬಲು ಕೆಲವೇ ಅಡಿ ಬಾಕಿ

Published

on

ಸುದ್ದಿದಿನ, ಹೊಸಪೇಟೆ: ರಾಜ್ಯದಲ್ಲಿ ಮಳೆ ಅಬ್ಬರ ಇಂದು ಕೊಂಚ ತಗ್ಗಿದ್ದು, ನೀರಿನ ಸೆಳೆವು ಮುಂದುವರಿದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ಬಳಿ ತುಂಗಭದ್ರಾ ತಂಬಲು ಇನ್ನೂ ಕೆಲವೇ ಅಡಿ ಬಾಕಿ ಇದೆ.

ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಅಬ್ಬರ ಹೆಚ್ಚಾಗಿದೆ. 8.581 ಟಿಎಂಸಿ ನೀರು ಒಂದೇ ದಿನಕ್ಕೆ ಹರಿದು ಬಂದು ತುಂಗಭದ್ರಾ ಜಲಾಶಯ ಸೇರಿದೆ ಎಂದು ಅಂದಾಜಿಸಲಾಗಿದೆ. ಪೂರ್ಣ ಜಲಾಶಯ ತುಂಬಲು ಇನ್ನು 11 ಅಡಿ ನೀರು ಬರಬೇಕಿದೆ. ಮಹಾ ಮಳೆ ಹೀಗೆ ಬಂದರೆ ಇನ್ನು ಕೆಲ ದಿನಗಳಲ್ಲಿ ತುಂಗಭದ್ರಾ ಜಲಾಶಯ ಪೂರ್ಣ ತುಂಬಲಿದೆ.

ಇನ್ನು ಭದ್ರಾ ಜಲಾಶಯ ಸೇರಿದಂತೆ ರಾಜ್ಯದ ವಿವಿಧೆಡೆ ನದಿಮೂಲಗಳಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

Trending

Exit mobile version