ದಿನದ ಸುದ್ದಿ

ಮೊಬೈಲ್ ಕಳ್ಳನ ಬಂಧನ : 2 ಲಕ್ಷ ಮೌಲ್ಯದ ಮೊಬೈಲುಗಳು ವಶ

Published

on

ಸುದ್ದಿದಿನ,ಭದ್ರಾವತಿ : ರಾಜ್ಯದ ವಿವಿಧ ಕಡೆಗಳಲ್ಲಿ ಮೊಬೈಲುಗಳನ್ನು ಕಳವು ಮಾಡಿ ಮಾರಾಟ ಮಾಡುತಿದ್ದ ಕಳ್ಳನನ್ನು ಭದ್ರಾವತಿ ಪೊಲೀಸರು ಬಂಧಿಸಿದ್ದಾರೆ.

ಭದ್ರಾವತಿ ಗ್ರಾಮಾಂತರ ವೃತ್ತನಿರೀಕ್ಷಕರಾದ ಈ ಓ ಮಂಜುನಾಥ್ ರವರ ನೇತೃತ್ವದಲ್ಲಿ ಡಿವೈಎಸ್ಪಿ ಸುಧಾಕರ ನಾಯಕರವರ ಮಾರ್ಗದರ್ಶನದಲ್ಲಿ ಕಾರ್ಯಚರಣೆ ನಡೆಸಿ ಮೊಬೈಲ್ ಕಳ್ಳರನ್ನು ಬಂದಿಸಿದ್ದು, ಬಂಧಿತರು ತಿಮ್ಲಾಪುರ ಕ್ಯಾಂಪು ವಾಸಿಯಾದ ಅಬ್ದುಲ್ ಖಾದರ್ ಎಂಬುವವನಾಗಿದ್ದಾನೆ.

ಬಂದಿತನಿಂದ 2.08 ಲಕ್ಷ ಬೆಲೆ ಬಾಳುವ ವಿವಿದ ಕಂಪನಿಗಳ ಮೊಬೈಲ್ ಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ. ಕಾರ್ಯಚರಣೆಯಲ್ಲಿ ಗ್ರಾಮಾಂತರ ಪೋಲಿಸ್ ಠಾಣೆ ಪಿಎಸ್ಐ ದೇವರಾಜ್, ಸಿಬ್ಬಂದಿಗಳಾದ ನಾಗರಾಜ್ ಎಂ, ಆದರ್ಶ ಶೆಟ್ಟಿ, ಹನಮಂತ ಅಮಾತಿ ಇದ್ದರು. ಇವರ ಕಾರ್ಯಕ್ಕೆ ಶಿವಮೊಗ್ಗ ಜಿಲ್ಲಾ ವರಿಷ್ಠಾದಿಕಾರಿಗಳಾದ ಶಾಂತರಾಜ್ ರವರು  ಅಭಿನಂದಿಸಿದ್ದಾರೆ.

ವರದಿ : ಕೋಗಲೂರು ಕುಮಾರ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version