ದಿನದ ಸುದ್ದಿ
ವೈನ್ ಸ್ಟೋರ್ ನಲ್ಲಿ ಮದ್ಯ ಕಳವು : ನಾಲ್ವರ ಬಂಧನ
ಸುದ್ದಿದಿನ,ಭದ್ರಾವತಿ : ತಾಲೂಕಿನ ಬಾರಂದೂರು ಗ್ರಾಮದ ಶ್ರೀವೆಂಕಟೇಶ್ವರ ವೈನ್ ಸ್ಟೋರ್ ನಲ್ಲಿ ಕಳ್ಳತನ ಮಾಡಿದ್ದ 4 ಜನರನ್ನು ಶುಕ್ರವಾರ ಭದ್ರಾವತಿ ಪೊಲೀಸರು ಬಂದಿಸಿದ್ದಾರೆ.
ಏಪ್ರಿಲ್ 16 ರಂದು ರಾತ್ರಿ ವೈನ್ ಸ್ಟೋರ್ ನಲ್ಲಿ ರಾತ್ರಿ ಮದ್ಯ ಕಳುವಾಗಿರುವ ಬಗ್ಗೆ ಮಾಲಿಕ ಹೆಚ್ ಎಲ್ ರಮೇಶ ಪೇಪರ್ ಟೌನ್ ಪೋಲಿಸ್ ಠಾಣೆಗೆ ದೂರು ನೀಡಿರುತ್ತಾರೆ. ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡ ಗ್ರಾಮಾಂತರ ವೃತ್ತನಿರೀಕ್ಷಕರಾದ ಈ.ಓ.ಮಂಜುನಾಥ್ ರವರ ನೇತೃತ್ವದಲ್ಲಿ ಡಿವೈಎಸ್ಪಿ ಸುಧಾಕರ್ ರವರ ಮಾರ್ಗದರ್ಶನದಲ್ಲಿ ಪಿಎಸ್ಐ ಭಾರತಿ ಹಾಗೂ ಸಿಬ್ಬಂದಿಗಳನ್ನೊಳಗೊಂಡು ತಂಡ ರಚಿಸಿ ಶುಕ್ರವಾರದಂದು ಆರೋಪಿತರನ್ನು ಬಂದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಆರೋಪಿತರಿಂದ 23,000 ರೂ ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ಸುಮಾರು 45 ಸಾವಿರ ರೂ ಮೌಲ್ಯದ ಪಲ್ಸರ್ ಕಂಪನಿಯ ದ್ವಿಚಕ್ರ ವಾಹನವನ್ನು ಪೋಲಿಸರು ವಶಪಡಿಸಿಕೊಂಡಿರುತ್ತಾರೆ.
ಅರೋಪಿತರನ್ನು ಭದ್ರಾವತಿ ತಾಲೂಕು ಡಿ.ಜಿ ಹಳ್ಳಿ ತಾಂಡದ ವಾಸಿಗಳಾದ , ಸೋಮಶೇಖರ್ . ಜೆ. ಮಣಿಕಂದನ್, ಯಾನೆ ಮಣಿಕಂಠ .(ಮಣಿ), ಆನಂದ ಯಾನೆ ಹೊಟ್ಟೆ ,ರಾಜಾನಾಯ್ಕ ಯಾನೆ ಗುಂಡ ಎಂದು ಗುರುತಿಸಲಾಗಿದ್ದು, ಅರೋಪಿಗಳನ್ನು ನ್ಯಾಯಂಗದ ಬಂದನಕ್ಕೆ ಒಪ್ಪಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243