ರಾಜಕೀಯ

ಭದ್ರಾವತಿ ಶಾಸಕ ಸಂಗಮೇಶ್ ಗೆ ಸಚಿವ ಸ್ಥಾನ ನೀಡಲು ಆಗ್ರಹಿಸಿ ಸಿದ್ದು ಮನೆ ಎದುರು ಧರಣಿ..!

Published

on

ಸುದ್ದಿದಿನ, ಬೆಂಗಳೂರು : ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಸಚಿವ ಸ್ಥಾನಕ್ಕಾಗಿ ಮುಂದುವರಿದಿದೆ ಆಕಾಂಕ್ಷಿಗಳ ಪೈಪೋಟಿ. ತಮ್ಮ ಬೆಂಬಲಿಗರನ್ನ ಮುಂದೆ ಬಿಟ್ಟು ಸಚಿವ ಸ್ಥಾನಕ್ಕೆ ಲಾಬಿ ಮಾಡಲಾಗುತ್ತಿದೆ.ಈ ಹಿನ್ನೆಲೆಯಲ್ಲಿ ಭದ್ರಾವತಿ ಶಾಸಕ ಸಂಗಮೇಶ್ ಪರ ಬೆಂಬಲಿಗರು ಸಿದ್ದರಾಮಯ್ಯ ನಿವಾಸದ ಬಳಿ ಧರಣಿ ಕೈಗೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸಂಗಮೇಶ್ ಬೆಂಬಲಿಗ ಚೇತನ್ “ಶಿವಮೊಗ್ಗಜಿಲ್ಲೆಯಲ್ಲಿರುವುದು ಒಬ್ಬರೇ ಕಾಂಗ್ರೆಸ್ ಶಾಸಕರು.ಬಿಜೆಪಿಯ ಭದ್ರಕೋಟಿ ಶಿವಮೊಗ್ಗ.ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಬಲಪಡಿಸಬೇಕು.
ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಬೇಕೆಂದರೆ ಸಚಿವ ಸ್ಥಾನ ನೀಡಬೇಕು. ಸಂಗಮೇಶ್ ಅವರಿಗೆ ಸಚಿವ ಸ್ಥಾನ ನೀಡಬೇಕು. ಸಿದ್ದರಾಮಯ್ಯ ಹೈಕಮಾಂಡ್ ಮೇಲೆ ಒತ್ತಡ ತರಬೇಕು’ ಎಂದು ಆಗ್ರಹಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version