ರಾಜಕೀಯ

ಬಿಜೆಪಿಯವರಂತೆ ಸದನದಲ್ಲಿ‌ ಕೂತು ಬ್ಲೂ ಪಿಲ್ಮ್ ನೋಡೋಕಾಗುತ್ತಾ | ಎಸ್.ಎಲ್.ಭೈರೇಗೌಡ ವ್ಯಂಗ್ಯ

Published

on

ಸುದ್ದಿದಿನ,ಚಿಕ್ಕಮಗಳೂರು | ರೈತನ ಮಗ ನಾಟಿ ಮಾಡ್ದೆ, ಕ್ಲಬ್ ನಲ್ಲಿ ಡ್ಯಾನ್ಸ್ ಮಾಡೋಕಾಗುತ್ತಾ, ಇಲ್ಲ ಬಿಜೆಪಿಯವರಂತೆ ಸದನದಲ್ಲಿ ಕೂತು ಬ್ಲೂ ಫಿಲ್ಮಂ ನೋಡೋಕಾಗುತ್ತಾ,ಬಿಜೆಪಿಯವ್ರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡ್ತಿದ್ದಾರೆ ಎಂದು ಈಶ್ವರಪ್ಪಗೆ ಚಿಕ್ಕಮಗಳೂರಿನಲ್ಲಿ ತಿರುಗೇಟು ನೀಡಿದರು ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಧರ್ಮೇಗೌಡ‌.

ನಾವು ಎಷ್ಟೇ ಒಳ್ಳೆ ಕೆಲಸ ಮಾಡಿದ್ರು ಬಿಜೆಪಿಯವ್ರಿಗೆ ಚೆಂದ ಕಾಣಲ್ಲ.ನಮ್ಮ ಬಗ್ಗೆ‌ ಪ್ರತಿನಿತ್ಯ ಮಾತನಾಡದಿದ್ರೆ ಬಿಜೆಪಿಯವರಿಗೆ ಸಮಾಧಾನ ಆಗಲ್ಲ‌.ನಾವು ಕೂತ್ರು ನಿಂತ್ರು ಅವರು ಮಾತನಾಡೋದನ್ನು ನಿಲ್ಲುಸುತ್ತಿಲ್ಲ.
ನಮ್ಮ ಬಗ್ಗೆ ಮಾತನಾಡದಿದ್ರೆ ತಿಂದ ಅನ್ನ ಮೈಗೆ‌ ಹತ್ತಲ್ಲ.ನಾವು‌ ಏನೇ ಮಾಡಿದ್ರು ಅವ್ರು ಮಾತಾಡ್ಬೇಕು, ಮಾತಾಡ್ತಾರೆ,ಸತ್ಯ ಏನೆಂಬುದು ಜನರಿಗೆ ಗೊತ್ತು ಎಂದು ಬಿಜೆಪಿ ವಿರುದ್ದವಾಗ್ದಾಳಿ ನಡೆಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version