ದಿನದ ಸುದ್ದಿ
ಬಂದ್ ಇದ್ರೂ ಒಂದು ಗಂಟೆ ಹೆಚ್ಚು ಅಂಗಡಿ ತೆರೆಯಲು ನಿರ್ಧಾರ..!
ಸುದ್ದಿದಿನ ಡೆಸ್ಕ್: ಕಾಂಗ್ರೆಸ್ ಹಾಗೂ ಮಿತ್ರ ಕೂಟಗಳು ಕರೆ ನೀಡಿರುವ ಭಾರತ್ ಬಂಧ್ ಗೆ ಪ್ರತಿಯಾಗಿ ತಮ್ಮ ಅಂಗಡಿಗಳನ್ನು ಒಂದು ಗಂಟೆ ಕಾಲ ಹೆಚ್ಚಿಗೆ ತೆರೆದಿರಲು ವ್ಯಾಪಾರಸ್ಥರು ನಿರ್ಧರಿಸಿದ್ದಾರೆ.
ಗುಲ್ಬರ್ಗದಲ್ಲಿ ಈ ರೀತಿಯ ಪೋಸ್ಟರ್ ಗಳು ಅಂಗಡಿಗಳ ಮುಂದೆ ರಾರಾಜಿಸುತ್ತಿವೆ. ಬಂದ್ ದಿನ ಒಂದು ಗಂಟೆ ಅಂಗಡಿಯನ್ನು ಹೆಚ್ಚಿಗೆ ತೆರೆಯಲಾಗುವುದು ಎಂದು ಪೋಸ್ಟರ್ ಹಾಕಿಕೊಂಡಿರುವ ಬಿಜೆಪಿ ಬೆಂಬಲಿತ ಉದ್ಯಮಿಗಳು ಬಲವಂತವಾಗಿ ಅಂಗಡಿ ಮುಚ್ಚಿಸಿದರೆ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401