ದಿನದ ಸುದ್ದಿ

ಭಾರತ್ ಬಂದ್: ಕಾಂಗ್ರೆಸ್‍ಗೆ 20 ಪಕ್ಷಗಳ ಬೆಂಬಲ

Published

on

ಸುದ್ದಿದಿನ ಡೆಸ್ಕ್: ಪೆಟ್ರೋಲ್, ಡೀಸೆಲ್ ಸೇರಿದಂತೆ ವಿವಿಧ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನೀಡಿರುವ ಭಾರತ್ ಬಂದ್ ಕರೆಗೆ 20ಕ್ಕೂ ಹೆಚ್ಚು ಪಕ್ಷಗಳು ಬೆಂಬಲ ಸೂಚಿಸಿವೆ. ಎನ್‍ಸಿಪಿ ಪಕ್ಷದ ಶರದ್ ಪವಾರ್, ಡಿಎಂಕೆ ಪಕ್ಷದ ಅಧ್ಯಕ್ಷ ಸ್ಟಾಲಿನ್ ಹಾಗೂ ಎಡಪಂಥೀಯ ನಾಯಕರು ಭಾರತ್ ಬಂದ್‍ಗೆ ಬೆಂಬಲ ಘೋಷಣೆ ಮಾಡಿವೆ.

ಆದರೆ ತೃಣಮೂಲ ಕಾಂಗ್ರೆಸ್ ಮಾತ್ರ ಬಂದ್‍ನಿಂದ ದೂರ ಉಳಿಯುವುದಾಗಿ ಹೇಳಿದೆ. ಬಂದ್‍ನ ಹಿಂದಿರುವ ಉದ್ದೇಶವನ್ನು ನಾವು ಬೆಂಬಲಿಸುತ್ತೇವೆ. ಆದರೆ ಪ್ರತಿಭಟನೆ ಕೈಗೊಳ್ಳುವುದಿಲ್ಲ ಎಂದು ಟಿಎಂಸಿ ತಿಳಿಸಿದೆ.

ಆಪ್‍ನಿಂದ ಬೆಂಬಲ ಇಲ್ಲ

ಭಾರತ್ ಬಂದ್ ಗೆ ಆಪ್ ಪಕ್ಷ ಬೆಂಬಲ ನೀಡಿಲ್ಲ ಎನ್ನಲಾಗಿದೆ. ಬಂದ್ ಬೆಂಬಲಿಸಿರುವ ಪಕ್ಷಗಳ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದ್ದು, ಅದರಲ್ಲಿ ಆಪ್ ಪಕ್ಷದ ಹೆಸರು ಇದೆ. ಆದರೆ ಪಕ್ಷದ ನಾಯಕರೊಬ್ಬರು ಬೆಂಬಲ ನೀಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಸೈದ್ಧಾಂತಿಕವಾಗಿ ನಾವು ಇದನ್ನು ವಿರೋಧಿಸುತ್ತೇವೆ. ಕಾಂಗ್ರೆಸ್ ಅವಧಿಯಲ್ಲಿ ಬಹುತೇಕ ಇದೇ ಪರಿಸ್ಥಿತಿ ಇತ್ತು ಎಂದು ಹೇಳಿದ್ದಾರೆ.

 

Leave a Reply

Your email address will not be published. Required fields are marked *

Trending

Exit mobile version