ದಿನದ ಸುದ್ದಿ
ನಾಳೆ ಮತ್ತು ನಾಡಿದ್ದು ಭಾರತ್ ಬಂದ್ : ಶಾಲಾ ಕಾಲೇಜುಗಳಿಗೆ ರಜೆ
ಸುದ್ದಿದಿನ ಡೆಸ್ಕ್ : ಅಖಿಲ ಭಾರತ ಕಾರ್ಮಿಕ ಸಂಘಟನೆಗಳು 8 ಮತ್ತು 9 ನೇ ತಾರೀಖಿನಂದು ಭಾರತ್ ಬಂದ್ ಗೆ ಕರೆ ನೀಡಿವೆ.ಮೋಟಾರು ವಾಹನ ಮತ್ತು ರಸ್ತೆ ಸುರಕ್ಷತಾ ತಿದ್ದುಪಡಿ ಮಸೂದೆ – 2017 ಮತ್ತು ಇತರೆ ಹನ್ನೆರಡು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ 2 ದಿನಗಳ ಬಂದ್ ಗೆ ಕರೆ ನೀಡಿವೆ.
KSRTC ಮತ್ತು BMTC ಸಂಚಾರ ಸ್ಥಗಿತಗೊಳಿಸಲಾಗುವುದು ಎಂದು ಸಾರಿಗೆ ಸಚಿವ D.C. ತಮ್ಮಣ್ಣ ಸ್ಪಷ್ಟಪಡಿಸಿದ್ದಾರೆ.ಆಟೋ, ಟ್ಯಾಕ್ಸಿ ಮಾಲೀಕರ ಸಂಘ ಬೆಂಬಲ ವ್ಯಕಪಡಿಸಿವೆ.ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಮಂಡಳಿ ಅಧ್ಯಕ್ಷ ಚನ್ನೇಗೌಡ ನೈತಿಕವಾಗಿ ಕಪ್ಪು ಪಟ್ಟಿ ಪ್ರದರ್ಶಿಸಿ ಬೆಂಬಲ ನೀಡುತ್ತೇವೆ,ಎಂದು ತಿಳಿಸಿದರು. ಖಾಸಗಿ ಆಸ್ಪತ್ರೆಗಳು ನೈತಿಕ ಬೆಂಬಲ ನೀಡುವುದಾಗಿ ಹೇಳಿದ್ದಾರೆ.
ಬೆಂಗಳೂರು ವಿವಿ, ಕರ್ನಾಟಕ ವಿವಿ,ವಿಶ್ವೇಶ್ವರಯ್ಯ ತಾಂತ್ರಿಕ ವಿವಿ,ಬೆಳಗಾವಿ ರಾಣಿ ಚನ್ನಮ್ಮ ವಿವಿ,ರಾಜೀವ್ ಗಾಂಧಿ ಆರೋಗ್ಯ ವಿವಿ ,ತುಮಕೂರು ವಿವಿ,ಪರೀಕ್ಷೆಗಳನ್ನು ಮುಂದೂಡಲಾಗಿದೆ. ಉಳಿದಂತೆ ಶಾಲಾ ಕಾಲೇಜುಗಳು ಪರಿಸ್ಥಿತಿಗನುಗುಣವಾಗಿ ಅಯಾ ಜಿಲ್ಲೆಯ ಜಿಲ್ಲಾಡಳಿತ ರಜೆಯ ಬಗ್ಗೆ ನಿರ್ಧಾರ ಮಾಡಲಿದ್ದಾರೆ.ಬ್ಯಾಂಕ್ ಗಳು ಸಹ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ಮಾಡುವ ಸಾಧ್ಯತೆ ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401