ದಿನದ ಸುದ್ದಿ
ಡಾಲಿಯ ‘ಭೈರವ ಗೀತ’ ಸಾಂಗ್ ಟೀಸರ್ ರಿಲೀಸ್ ; ಟೀಸರ್ ನೋಡಿ..!
ಸುದ್ದಿದಿನ ಡೆಸ್ಕ್ : ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ನಿರ್ಮಾಣವಾಗಿರುವ ಸಿನೆಮಾ ಭೈರವಗೀತ. ಈ ಸಿನೆಮಾ ಹಲವು ವಿಶೇಷತೆಗಳಿಂದ ಕೂಡಿದ್ದಾಗಿದ್ದರಿಂದ ಸದಾ ಸುದ್ದಿಯಲ್ಲಿರುತ್ತದೆ. ಅಂದಹಾಗೆ ಈ ಸಿನೆಮಾ ವಿಶೇಷತೆಗಳೆಂದರೆ, ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಕನ್ನಡದ ನಟನ ಪ್ರತಿಭೆ ಗುರುತಿಸಿ ಅವರಿಗೊಂದು ಅದ್ಭುತ ಅವಕಾಶ ದೊರಕಿಸಿ ಕೊಟ್ಟಿರುವುದು. ಈ ಪ್ರತಿಭಾವಂತ ಕಲಾವಿದ ಯಾರು ಎಂಬ ಪ್ರಶ್ನೆಗೆ ನಿಮಗೆ ಈಗಾಗಲೇ ಉತ್ತರ ಸಿಕ್ಕಿದೆ. ಅವರೇ ನಮ್ಮ ಕನ್ನಡದ ಧನಂಜಯ್ ಅಲಿಯಾಸ್ ಟಗರು ಡಾಲಿ. ಮೊನ್ನೆ ಮೊನ್ನೆಯಷ್ಟೇ ಭೈರವ ಗೀತ ಸಿನೆಮಾದ ಟೀಸರ್ ರಿಲೀಸ್ ಮಾಡಿತ್ತು ಚಿತ್ರ ತಂಡ. ಈಗ ಈ ಸಿನೆಮಾದ ಹಾಡಿನ ಟೀಸರ್ ರಿಲೀಸ್ ಮಾಡಿದೆ ಹಾಗೇ ಈ ಹಾಡಿನ ಲಿರಿಕಲ್ ಸಾಂಗ್ ಅನ್ನು ಇಂದು ರಿಲೀಸ್ ಮಾಡಲಿದೆ ಚಿತ್ರ ತಂಡ. ಹಾಗಾದ್ರೆ ಮೊದಲು ನಾವು ಹಾಡಿನ ಟೀಸರ್ ನೋಡೋಣ ಬನ್ನಿ.