ದಿನದ ಸುದ್ದಿ
ಭೀಮಾ ಕೋರೆಂಗಾವ್ ಪ್ರಕರಣ | ತೆಲಂಗಾಣದ ಕವಿ ವರವರ ರಾವ್‌ಗೆ ಬಾಂಬೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು
ಸುದ್ದಿದಿನ,ಮುಂಬೈ: ಮೂರು ವರ್ಷಗಳಿಂದ ಭೀಮಾ ಕೋರೆಂಗಾವ್ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿದ್ದ ತೆಲಂಗಾಣದ ಕವಿ ವರವರ ರಾವ್‌ಗೆ ಆರೋಗ್ಯ ಸಮಸ್ಯೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್ ಆರು ತಿಂಗಳವರೆಗೆ ಷರತ್ತುಬದ್ಧ ಜಾಮೀನು ನೀಡಿದೆ.
ಅವರು ಎನ್‌ಐಎ ಕೋರ್ಟ್‌ನ ವ್ಯಾಪ್ತಿ ಬಿಟ್ಟು ಬೇರೆಡೆ ತೆರಳಬಾರದು ಹಾಗೂ ಭೀಮಾ ಕೋರೆಂಗಾವ್ ಪ್ರಕರಣಕ್ಕೆ ಕಾರಣವಾದ ಯಾವುದೇ ಚಟುವಟಿಕೆಗಳಲ್ಲಿ ತೊಡಗಬಾರದು ಎಂದು ಕೋರ್ಟ್ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದೆ.
ವರವರ ರಾವ್ ಅವರು ಎನ್ ಐ ಎ ಕೋರ್ಟ್ ವ್ಯಾಪ್ತಿ ಬಿಟ್ಟು ಎಲ್ಲಿಗೂ ಹೋಗುವ ಹಾಗಿಲ್ಲ. ಅಗತ್ಯ ಬಿದ್ದಾಗ ಕೋರ್ಟ್ ವಿಚಾರಣೆಗೆ ಹಾಜರಾಗಬೇಕು.ಪ್ರಕರಣ ದಾಖಲಾಗಲು ಕಾರಣವಾದ ಯಾವುದೇ ಚಟುವಟಿಕೆಗಳಲ್ಲಿ ತೊಡಗಬಾರದು ಎಂದು ಷರತ್ತು ವಿಧಿಸಿರುವ ಬಾಂಬೇ” ಹೈಕೋರ್ಟ್ ಭೀಮಾ ಕೋರೆಂಗಾವ್ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಸೇರಿದ್ದ ಕವಿ ವರವರ ರಾವ್‌ಗೆ 6 ತಿಂಗಳ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಅವರನ್ನು ಬಿಡುಗಡೆ ಮಾಡಬೇಕು ಎಂದು ಸಾಮಾಜಿಕ ಜಾಲತಾಣ ಸೇರಿದಂತೆ ದೇಶದ ಬುದ್ದಿಜೀವಿಗಳು, ಪ್ರಗತಿಪರರು, ಸಾಹಿತಿಗಳು ಸತತವಾಗಿ ಆಗ್ರಹಿಸಿದ್ದರು.
#VaravaraRao granted bail for 6 months.
Varavara Rao is no stranger to being imprisoned, but the poet and activist is also the conscience of our society – an intellectual we must rise to protect from the excesses of a state determined to destroy dissent
pic.twitter.com/Gz3vNRlka7— Karwan e Mohabbat (Caravan of Love) (@karwanemohabbat) February 22, 2021
ಸುದ್ದಿದಿನ.ಕಾಂ|ವಾಟ್ಸಾಪ್|9980346243